ಕೈಕಂಬ:ಸಂತ ಅಂತೋನಿ ಚರ್ಚ್ ಫೆರ್ಮಾಯಿ -ಉಳಾಯಿಬೆಟ್ಟು ಗ್ರಾಮ ಮಂಗಳೂರು ಇದರ ಕಿರು ಕ್ರೈಸ್ತ ಸಮುದಾಯದ ಸ್ಥಾಪನೆಯ ಬೆಳ್ಳಿ ಹಬ್ಬವು ಮೆ.19 ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಅಂದು ಬೆಳಗ್ಗೆ 7.30ಗಂಟೆಗೆ ಚರ್ಚ್ ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳು ಅತಿ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾರವರು ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿ ಸಂದರ್ಭೊಚಿತ್ತವಾಗಿ ಪ್ರಬೋಧನೆ ನೀಡಿದರು.
ಸಾಯಂಕಲ 5.30 ಗಂಟೆಗೆ ಚರ್ಚಿನ ವಿವಿಧ ವಾಳೆಗಳು ಬೈಬಲ್ ಆದರಿತ ನಾಟಕಗಳನ್ನು ಪ್ರದರ್ಶಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕ ವಂದನೀಯ ಸ್ವಾಮಿ ಜೋಕಿಂ ಫೆರ್ನಾಂಡಿಸ್‍ರವರು ಸಬಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಫೆರ್ಮಾಯ್ ಚರ್ಚ್ ವಂದನೀಯ ಸ್ವಾಮಿ ಆಂದ್ರು ಡಿ’ಸೋಜಾರವರು ಮುಖ್ಯ ಅತಿಥಿಯಾಗಿದ್ದರು. ಫೆರ್ಮಾಯ್ ಚರ್ಚ್‍ನಲ್ಲಿ ಧರ್ಮಗುರುಗಳಾಗಿ ಸೇವೆ ನೀಡಿದ ವಂ.ಜೆರಾಲ್ಡ್ ಪಿಂಟೊ, ಮತ್ತು ವಂ.ರೊಬರ್ಟ್ ಕ್ರಾಸ್ತಾ ಹಾಗೂ ಮಂಗಳೂರು ಸಿಟಿ ವಲಯದ ಕಿರು ಕ್ರೈಸ್ತ ಸಮುದಾಯದ ಸಂಯೋಜಕರು ಕ್ರೀ ವಿಲ್ಯ ಕುಲಾಸೊ ಅತಿಥಿಗಳಾಗಿದ್ದರು. ಚರ್ಚಿನ ಧರ್ಮಗುರುಗಳು ವಂದನೀಯ ಲುವಿಸ್ ಕುಟಿನ್ಹಾ , ಉಪಾಧ್ಯಕ್ಷರು ಜಾನ್ ಪ್ರಕಾಶ್ ಪಿಂಟೊ, ಕಾರ್ಯದರ್ಶಿ ಕ್ಲಾರಾ ಪಿಂಟೊ ಮತ್ತು ಫೆರ್ಮಾಯ್ ಕಿರು ಕ್ರೈಸ್ತ ಸಮುದಾಯದ ಸಂಚಾಲಕರು ಸಿರಿಲ್ ಲೋಬೊ ಎಲ್ಲಾ ಅತಿಥಿಗಳನ್ನು ಸನ್ಮಾನಿಸಿ ಸ್ಮರಣಿಕೆಗಳನ್ನು ನೀಡಿದರು. ಫೆರ್ಮಾಯ್ ಕಿರು ಕ್ರೈಸ್ತ ಸಮುದಾಯದ ಏಳಿಗೆಗಾಗಿ ಸಂಚಾಲಕರಾಗಿ ಸೇವೆನೀಡಿದ ಜೋಸೆಫ್ ವೇಗಸ್, ಅಂತೋಡಿ ಡಿ’ಸೋಜಾ, ಡೊನಾಲ್ಡ್ ಕುಟಿನ್ಹೊ ಮತ್ತು ದೆನಿಸ್ ಪಿಂಟೊ ಇವರನ್ನು ಸ್ಮರಿಸಿ ಸನ್ಮಾನಿಸಲಾಯಿತು. ಸಿಲ್ವೆಸ್ಟರ್ ಲೋಬೊ, ದೆನಿಸ್ ಪಿಂಟೊ ಮತ್ತು ಕುಮಾರಿ ಜಾಸ್ಮಿನ್ ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು.
