ಶ್ರೀ ಕ್ಷೇತ್ರ ಕುಡುಪುವಿನ ಆರಾಧ್ಯ ದೈವಗಳಾದ ಶ್ರೀ ಜಾರಂದಾಯ ಬಂಟ, ಶ್ರೀ ಧೂಮಾವತಿ ಬಂಟ ಹಾಗೂ ಪಿಲಿ ಚಾಮುಂಡಿ ದೈವಗಳ ಬಂಡಿ ಉತ್ಸವ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ ದೈವಕ್ಕೆ ವಿನೂತನವಾದ ಬಂಡಿ ರಥ ಅರ್ಪಿಸಲಾಗಿದ್ದು, ಸಹಸ್ರಾರು ಭಕ್ತರು ಸಾಕ್ಷ್ಯಿಯಾದರುಯ.
ಶ್ರೀ ಅನಂತಪದ್ಮನಾಭ ದೇವರಿಗೆ ರಾತ್ರಿಯ ಮಹಾಪೂಜೆಯಾದ ನಂತರ ಕ್ಷೇತ್ರದ ದೈವಸ್ಥಾನದಲ್ಲಿ ನಾಲ್ಕೂ ದೈವಗಳಿಗೆ ಗಗ್ಗರ ಸೇವೆ ಹಾಗೂ ವಿಶೇಷ ಅಣಿಕಟ್ಟಿನ ನೇಮೋತ್ಸವ ನಡೆಯಿತು. ಈ ವೇಳೆ ಭಕ್ತಜನರಿಗೆ ಅನ್ನಸಂತರ್ಪಣೆ ಜರುಗಿತು.
ನೇಮೋತ್ಸವದ ವೇಳೆ ಶ್ರೀ ದೇವರ ಬ್ರಹ್ಮರಥ ಸಾಗುವ ರಾಜಬೀದಿಯಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವದ ನೂತನ ಬಂಡಿ ವಾಹನ ಸಾಗಿತು.
ಭಕ್ತರು ಬಂಡಿ ವಾಹನಕ್ಕೆ ಹುರುಳಿ ಧಾನ್ಯ, ತೆಂಗಿನಕಾಯಿ, ಹೂಹಾರ, ಹಾಲು, ಹಿಂಗಾರ, ಸೀಯಾಳ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಕೆ ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಬಾಲಕೃಷ್ಣ ಕಾರಂತ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಮನೋಹರ ಭಟ್, ಪ್ರಭಾಕರ ಭಟ್, ಮೊಕ್ತೇಸರ ಭಾಸ್ಕರ ಕೆ, ಸುಜನ್‍ದಾಸ್ ಕುಡುಪು, ವಾಸುದೇವ ರಾವ್ ಕುಡುಪು, ರವೀಂದ್ರ ನಾಯಕ್ ಕುಡುಪು, ದಿನೇಶ್ ಪೆಜತ್ತಾಯ, ಉದಯಕುಮಾರ್ ಕುಡುಪು, ರಾಘವೇಂದ್ರ ಭಟ್, ರವಿ ಪ್ರಸನ್ನ, ಅರವಿಂದ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.


