ಗುರುಪುರ : ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಪೊಳಲಿ ದ್ವಾರದ ಎದುರಿರುವ ಸ್ವಾಮಿ ವಿವೇಕಾನಂದ ಸರ್ಕಲ್ ಸಮೀಪ ಮೇ. 16ರಂದು(ಗುರುವಾರ) ಮಧ್ಯಾಹ್ನ ಟಿಪ್ಪರ್-ಬೈಕ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.gur-may-16-bike-tipper acdt-1
ಪೊಳಲಿ ದ್ವಾರದೆದುರಿರುವ ಪೆಟ್ರೋಲ್ ಪಂಪಿನಲ್ಲಿ ಡೀಸೆಲ್ ತುಂಬಿಸಿ ಹೆದ್ದಾರಿಯತ್ತ ಟಿಪ್ಪರ್ ಬರುತ್ತಿದ್ದಾಗ, ಪೊಳಲಿಯಿಂದ ಕೈಕಂಬದ ಕಡೆಗೆ ಸಾಗುತ್ತಿದ್ದ ಬೈಕ್ ಹಿಂದಿನಿಂದ ಡಿಕ್ಕಿಯಾಗಿದೆ. ಅಪಘಾತದ ವೇಳೆ ಬೈಕ್ ಸವಾರ ರಸ್ತೆಗೆ ಬಿದ್ದುದರಿಂದ ಕಾಲಿಗೆ ಗಾಯವಾಗಿದೆ. ಟಿಪ್ಪರಿನ ಹಿಂದಿನ ಚಕ್ರದಡಿಗೆ ಬಿದ್ದ ಬೈಕ್ ಜಖಂಗೊಂಡಿದೆ. ಗಾಯಾಳು ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಬಳಿಕ ಎರಡೂ ಕಡೆಯವರು ಪ್ರಕರಣ ರಾಜಿಯಲ್ಲಿ ಮುಗಿಸಿದ್ದಾರೆ ಎಂದು ಬಜ್ಪೆ ಪೊಲೀಸರು ಹೇಳಿದರು.

IMG-20190516-WA0025

By Suddi9

Leave a Reply

Your email address will not be published. Required fields are marked *