ಗುರುಪುರ : ಇಲ್ಲಿನ ಶ್ರೀ ವಜ್ರದೇಹಿ ಮಠದಲ್ಲಿ ಮೇ 17ರಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ನೇತೃತ್ವದಲ್ಲಿ ಶ್ರೀ ನರಸಿಂಹ ಜಯಂತಿ ಮಹೋತ್ಸವ ಜರುಗಲಿದೆ.
ಬೆಳಿಗ್ಗೆ 6 ಗಂಟೆಗೆ ಸ್ವಸ್ತಿ ಪುಣ್ಯಾಹಃ ಪ್ರಾರ್ಥನೆ, ತೋರಣ ಮುಹೂರ್ತ, ಆದ್ಯ ಗಣಯಾಗ, ಮನ್ಯುಸೂಕ್ತ ಹೋಮ, ಶ್ರೀ ದೇವರಿಗೆ ಮಹಾಭಿಷೇಕ, ಬೆಳಿಗ್ಗೆ ಒಂಬತ್ತು ಗಂಟೆಗೆ ನವಗ್ರಹ ಮಂಡಲ ಪೂಜೆ, 1ರಿಂದ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6ಕ್ಕೆ ಶ್ರೀ ದೇವರಿಗೆ ಮಹಾರಂಗ ಪೂಜೆ, ಶ್ರೀ ದೇವರ ಬಲಿ ಉತ್ಸವ, ವಿಶೇಷ ಆಳುಪಲ್ಲಕಿ ಉತ್ಸವ, ಕಟ್ಟೆಪೂಜೆ, ದರ್ಶನ ಬಲಿ, ವಸಂತ ಮಂಟಪ ಪೂಜೆ, ಬಟ್ಟಲು ಕಾಣಿಕೆ, ಮಹಾಮಂತ್ರಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
