ಬಜ್ಪೆ : ಕೈಕಂಬದಿಂದ ಸುಂಕದಕಟ್ಟೆಯತ್ತ ಸಾಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಸಂಜೆ ಸುಂಕದಕಟ್ಟೆ ಸಮೀಪದ ಕಜೆ ಪದವಿನಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ದಿ. ವಿಶ್ವನಾಥ ಎಂಬವರ ಪುತ್ರ ವಿಘ್ನೇಶ್(38) ಆಗಿದ್ದು, ಇವರು ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಬೈಕಿಂದ ಎಸೆಯಲ್ಪಟ್ಟ ಇವರ ತಲೆ ರಸ್ತೆ ಬದಿಯ ಕಲ್ಲಿಗೆ ಬಡಿದು, ತಲೆ ಒಡೆದು ಹೋಗಿದೆ. ಇವರು ಡೀಜೆ ಸೌಂಡ್ ಸಿಸ್ಟಮ್ ಹಾಗೂ ಬಜ್ಪೆಯ ಬಾರೊಂದರ ಪಾರ್ಕಿಂಗಿನಲ್ಲಿ ಕೆಲಸ ಮಾಡುತ್ತಿದ್ದರು. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

