ಪೊಳಲಿ:ಮಂಗಳೂರು ಲೋಕ ಸಭಾಕ್ಷೇತ್ರದಲ್ಲಿ ಸತತ ಮೂರನೇ ಭಾರಿ ಸಂಸದರಾಗಿ ಆಯ್ಕೆಯಾದ ಮಂಗಳೂರು ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರೊಂದಿಗೆ ಶುಕ್ರವಾರ ಪೊಳಲಿ ದೇವಳಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಮಾಧವ ಭಟ್ ಮತ್ತು ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ, ತಾ.ಪಂ ಸದಸ್ಯ ಯಶವಂತ ಪೂಜಾರಿ, ಪಂಚಾಯತಿ ಸದಸ್ಯರಾದ ಲೋಕೇಶ್ ಭರಣಿ,ಸುರೇಶ್ ಮಣಿಕಂಠಪುರ,ಕರಿಯಂಗಳ ಗ್ರಾಮದ ಬಿಜೆಪಿ ಅಧ್ಯಕ್ಷ ಗೋಪಾಲ ಬಂಗೇರಾ ಹಾಗೂ ಬಿಜೆಪಿ ಕಾರ್ಯಕರ್ತರು ಸಂಸದ ಶಾಸಕರನ್ನು ಸ್ವಾಗತಿಸಿದರು.
ಸಂಸದರೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ,ಎಪಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ ವಾಮದಪದವು, ಸುಕೇಶ್ ಚೌಟ,ಚಂದ್ರಶೇಖರ್ ಶೆಟ್ಟಿ, ಮಾಣಿ ಗ್ರಾ.ಪಂ ಸದಸ್ಯ ಗಣೇಶ್ ರೈ, ಪವನ್ ಕುಮಾರ್,ಚರಣ್‍ಬಡಕಬೈಲ್, ಸುಬ್ರಾಯ ಕಾರಂತ,ಇಂದ್ರೇಶ್ ಬಿಸಿರೋಡ್, ಅಶೋಕ್ , ಜಯಂತ ಮಣಿಕಂಠಪುರ, ಸತೀಶ್, ಯಶೋಧರ, ರೋಷನ್, ಕಾರ್ತಿಕ್ ಬಲ್ಲಾಳ್ ಮುರಳಿ, ನವೀನ್ ,ಸೇಸಪ್ಪ ಮತ್ತಿತರರು ಇದ್ದರು.

