ಬಂಟ್ವಾಳ: ಶುಕ್ರವಾರದಿಂದಲೇ( ಮೇ೧೭) ಜಾರಿಯಾಗುವಂತೆ ಬಂಟ್ವಾಳ ಪುರವಾಸಿಗಳಿಗೂ ಕುಡಿಯುವ ನೀರಿಗೆ ರೇಷನಿಂಗ್ ಶುರುವಾಗಿದೆ.ಈ ಬಗ್ಗೆ ಪುರಸಭೆ ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮೇ.17 ರಿಂದಲೇ  ಇನ್ನು ಎರಡು ದಿವಸಕ್ಕೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಸಹಿತ ಕೆಲ  ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮಾತ್ರ ಈ ವರೆಗೂ ನೀರಿನ ರೇಷನಿಂಗ್ ಆರಂಭಗೊಂಡಿರಲಿಲ್ಲ.
IMG-20190516-WA0020ಬಂಟ್ವಾಳ ನೇತ್ರಾವತಿ ನದಿಯ ಜಕ್ರಿಬೆಟ್ಟು ಸಮೀಪದ ಕಾಯರ್ ಗುಂಡಿಯಿಂದ ನೀರನ್ನು ಜಕ್ರಿಬೆಟ್ಟು ಕುಡಿಯುವ ನೀರಿನ ಪೂರೈಕೆಯ ಘಟಕಕ್ಕೆ ಲಿಫ್ಟ್ ಮಾಡಿ ದಿನದ ಬೆಳಿಗ್ಗೆ ಮತ್ತು ಸಂಜೆ ಈ ಎರಡು ಹೊತ್ತಿನಲ್ಲಿ ಪುರವಾಸಿಗಳಿಗೆ  ನೀರು ಸರಬರಾಜು ಮಾಡಲಾಗುತಿತ್ತು.ಸದ್ಯ ಕಾಯರ್ ಗುಂಡಿಯಲ್ಲೂ ನೀರಿನ ಪ್ರಮಾಣ ಕುಸಿಯುತ್ತಿದ್ದರೆ, ನೇತ್ರಾವತಿ ನದಿ ಪೂರ್ಣ ಬತ್ತಿಹೋಗಿರುವ ಕಾರಣ ಈ ಕ್ರಮವನ್ನು ಪುರಸಭೆ ಕೈಗೊಂಡಿದೆ.   ಇದೀಗ 24*7 ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡು,ಮಾಜಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆಯಾದರೂ ಮನೆ,ಮನೆಗೆ ನೀರಿನ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ಕಾರ್ಯ ಇನ್ನೂ ಪೂರ್ಣವಾಗಿಲ್ಲ.     ಈ ನಡುವೆಪಶ್ಚಿಮ ಘಟ್ಟದಿಂದ ಇಳಿದು ಸಮುದ್ರ ಸೇರುವ ನೇತ್ರಾವತಿ ನದಿಯ ಒಳಹರಿವು ಕುಸಿದಿದ್ದು, ತಳ ಕಾಣಿಸುತ್ತಿದೆ. ಪುರಸಭಾ ವ್ಯಾಪ್ತಿಯ ಜನರಿಗೆ ನೀರು ಸರಬರಾಜು ಮಾಡುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್ ವೆಲ್ ಜಕ್ರಿಬೆಟ್ಟು ನದಿ ಕಿನಾರೆಯಲ್ಲಿದ್ದು, ಜಾಕ್ ವೆಲ್ ಪ್ರದೇಶದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ನದಿಯಲ್ಲಿ ನೀರಿನ ಹರಿವು ನಿಂತು ಹೋದ ಕಾರಣ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿನ್ನು ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವ ನಿರ್ಧಾರವನ್ನು ಪುರಸಭೆ ಪ್ರಕಟಿಸಿದೆ.
IMG-20190514-WA0026
ತುಂಬೆಯಲ್ಲಿ 3.77 ಮೀ.: ತುಂಬೆ ವೆಂಟೆಡ್ ಡ್ಯಾಂನಲ್ಲಿ ಯು ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.ಗುರುವಾರ ಸಂಜೆಯ ವೇಳೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 3.77 ಮೀ.ಗೆ ಇಳಿದಿತ್ತು.ಸುಡು ಬಿಸಿಲಿಗೆ ಡ್ಯಾಂನಲ್ಲಿ  ಎರಡರಿಂದ ಮೂರು ಮೀ.ನಷ್ಟು ನೀರು ಅವಿಯಾಗುತ್ತಿದೆ.ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರನ್ನು ಪಂಪಿಂಗ್ ಮಾಡಿ ಪೂರೈಕೆ ಮಾಡಲಾಗುತ್ತಿದೆ.   ತುಂಬೆ ಡ್ಯಾಂನಲ್ಲಿ  ಸೋಮವಾರ ಇದ್ದ3.88 ರಷ್ಟಿದ್ದ  ನೀರಿನ ಮಟ್ಟ 3.77 ಮೀ.ಇಳಿದಿದ್ದು, ಗಾಬರಿಯನ್ನುಟ್ಟಿಸಿದೆ.ಇಂತಹ ಜಲಕ್ಷಾಮ ಎಂದೆಂದು ಬಂದಿರಲಿಲ್ಲ ಎಂದು ಹಿರಿಯರು ಅಭಿಪ್ರಾಯಪಡುತ್ತಿದ್ದಾರೆ.ಇದೇ ಮೊದಲಿಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೂ ನೀರಿನ ರೇಷನಿಂಗ್ ಆರಂಭವಾಗಿದೆ. ಒಂದೆರಡು ದಿನದಲ್ಲಿ ಮಳೆ ಬಾರದಿದ್ದರೆ ದೇವರೇಗತಿ.

By Suddi9

Leave a Reply

Your email address will not be published. Required fields are marked *