ಕೈಕಂಬ:ಶ್ರೀ ರಾಮಕೃಷ್ಣಪರಮಹಂಸರ ವಿಶ್ವಭಾವೈಕ್ಯ ಮಂದಿರದ ದಶಮಾನೋತ್ಸವದ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಚಂಡಿಕಾಹೋಮ ನಡೆಯಿತು. ಪೊಳಲಿ ದೇವಳದ ಅರ್ಚಕ ನಾರಾಯಣ ಭಟ್ ಪೂಜೆ ನೆರವೇರಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ, ಆಶ್ರಮವಾಸಿಗಳು ಭಕ್ತರು ಹಾಗೂ ಆಶ್ರಮದ ವಿದ್ಯಾರ್ಥಿಗಳು ಇದ್ದರು.


