ಬಂಟ್ವಾಳ: ತಾಲೂಕಿನ ಇರಾಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಶ್ರೀ ನರಸಿಂಹ ಜಯಂತಿ,ದಶಮ ಪ್ರತಿಷ್ಠಾ ವರ್ಧಂತಿ ಮತ್ತು ಮೃತ್ಯುಂಜಯ ಹವನದ ಅಮಂತ್ರಣಪತ್ರಿಕೆಯ ಬಿಡುಗಡೆಯ ಸರಳ ಸಮಾರಂಭ ದೇವಳದ ವಠಾರದಲ್ಲಿ ನಡೆಯಿತು. ಮಂಚಿ ಕುಕ್ಕಾಜೆಯ ಧರ್ಮಜಾಗರಣ ಸಮಿತಿಯ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅವರು ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮೇ17ರಂದು ನರಸಿಂಹ ಜಯಂತಿ,28,29 ರಂದು ದಶಮ ಪ್ರತಿಷ್ಠಾ ವರ್ಧಂತಿ ಮತ್ತು ಮೃತ್ಯುಂಜಯ ಹವನ ಜರಗಲಿದೆ ಎಂದರು.
ಜನರಲ್ಲಿ ಜಾಗೃತಿ ಮೂಡಿಸುವುದು ಧಾರ್ಮಿಕ ಕಾರ್ಯಕ್ರಮದ ಉದ್ದೇಶವಾಗಿದೆ. ದೇವಳದಲ್ಲಿ ನಡೆಯುವ ಈ ಎಲ್ಲಾ ಕಾರ್ಯದಲ್ಲಿಗ್ರಾಮಸ್ಥರು,ಭಗವದ್ಬಕ್ ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ವಿಠಲ ಪ್ರಭು,ರವೀಂದ್ರ ಕುಕ್ಕಾಜೆ,ಭಾಸ್ಕರ ಮದನಾಜೆ,ಸತೀಶ್ ಮದನಾಜೆ,ಶ್ರೀದೇವಿ ಕೈಯ್ಯೂರು,ಅನುಪಮಾ,ಶಾಲಿನಿ,ಶಚ್ಚಿಂ ದ್ರಮದನಾಜೆ,ಚಂದ್ರಮೋಹನ ಕುಕ್ಕಾಜೆ ಮೊದಲಾದವರಿದ್ದರು.
Attachments area

