ಕೈಕಂಬ : ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಪಡೆಯಲು ಕಷ್ಟವಾಗುತ್ತಿದೆ. ಅಧಿಕಾರದಲ್ಲಿರುವ ಸರ್ಕಾರಗಳು ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದಿಲ್ಲ. ಪರಿಣಾಮ ಕಾರ್ಮಿಕ ವರ್ಗ ತೊಂದರೆಗೀಡಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಬೇಕೆಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಕರೆ ನೀಡಿದರು.gur-june-2-citu(vasanth achari)

ಕಾರ್ಮಿಕರ ದಿನಾಚರಣೆಯಾದ ಮೇ ಒಂದರಂದು ಗುರುಪುರ ಕೈಕಂಬ ಜಂಕ್ಷನಿನಲ್ಲಿ ಸಿಐಟಿಯು ಗುರುಪುರ ವಲಯ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಆಚಾರಿ ಮಾತನಾಡಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಯು ಬಿ ಲೋಕಯ್ಯ ಮಾತನಾಡುತ್ತ, ಎಡಪಕ್ಷ ನಿರಂತರ ಕಾರ್ಮಿಕರ ಹಕ್ಕುಗಳಿಗಾಗಿ ಪರ ಹೋರಾಟ ನಡೆಸುತ್ತಿದೆ ಎಂದರು.

ವಲಯ ಅಧ್ಯಕ್ಷ ಗಂಗಯ್ಯ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕುಪ್ಪೆಪದವು ಸದಾಶಿವ ದಾಸ್ ಪ್ರಸ್ತಾವಿಕ ಮಾತನಾಡಿದರು. ಸಮಿತಿಯ ಸದಸ್ಯರಾದ ವಸಂತಿ ಕುಪ್ಪೆಪದವು, ಜಯಶೀಲ, ಭವಾನಿ, ಯಶೋದಾ, ವಾರಿಜಾ, ಮನೋಜ್ ವಾಮಂಜೂರು ಮೊದಲಾದವರಿ ಇದ್ದರು.

By suddi9

Leave a Reply

Your email address will not be published. Required fields are marked *