ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಕಾರ್ಯಾಚರಿಸುವ ಹಿಂದೂಸ್ತಾನ್ ಪೆಟ್ರೋಲಿಯಂ  ಕಾರ್ಪೋರೇಷನ್‌ ಲಿ. ಗ್ಯಾಸ್ ಪೈಪ್ ಲೈನ್ ಸಂಸ್ಥೆಯ ದಿನಗೂಲಿ ನೌಕರರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸ್ಥಳಕ್ಕೆ ಆಗಮಿಸಿ ನೌಕರರ ಅಹವಾಲು ಸ್ವೀಕರಿಸಿದರು.

Gas Patrolium (2)

Gas Patrolium (3)

Gas Patrolium (1)
ಪೈಪ್‍ಪೈನ್ ಅಳವಡಿಕೆ ಕಾಮಗಾರಿಗೆ ಪ್ರಾರಂಭದಿಂದಲೂ ನೌಕರರಾದ ಮಳಲಿ, ಕೈಕಂಬ ಕಂದಾವರ ಪರಿಸರದ ನಿವಾಸಿಗಳಾ 11 ಮಂದಿಯನ್ನು ಸಂಸ್ಥೆ ವಜಾಗೊಳಿಸಿತು. ವಜಾಗೊಳಿಸಿರುವುದನ್ನು ಖಂಡಿಸಿ, ನೌಕರರು ಪ್ರತಿಭಟನೆ ನಡೆಸಿದರು.
ನೌಕರರ ಅಹವಾಲು ಸ್ವೀಕರಿಸಿದ ಶಾಸಕರು, ವಜಾಗೊಂಡಿರುವ ನೌಕರರನ್ನು ಪುನಃ ಕರ್ತವ್ಯಕ್ಕೆ ನೇಮಿಸುವಂತೆ ಸೂಚಿಸಿದರು. ಪ್ರಾರಂಭದ ದಿನಗಳಿಂದ ಸಂಸ್ಥೆಗೆ ದುಡಿದ ನೌಕರರಿಗೆ ನೈತಿಕ ಬೆಂಬಲ ನೀಡಬೇಕು. ಅವರನ್ನು ಕೈಬಿಡುವ ಬದಲು ಅಗತ್ಯವಿದ್ದರೆ ಹೆಚ್ಚುವರಿ ನೌಕರರನ್ನು ನೇಮಿಸಿ ಎಂದು ರಾಜೇಶ್ ನಾಯ್ಕ್ ಸಲಹೆ ನೀಡಿದರು.
ಸಂಸ್ಥೆಯ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ವಜಾಗೊಂಡಿರುವ ನೌಕರರು ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಸಂಸ್ಥೆಯ ಜಿ.ಎಮ್ ರಾಜಶೇಖರನ್ ತಿಳಿಸಿದರು.
ಕಂಪನಿಯ ಡಿ.ಜಿಎಮ್.ಬಿಶ್ವಾಸ್ ಕುಮಾರ್ ಶರ್ಮ, ಮೆನೇಜರ್ ಕಿರಣ್ ಕುಮಾರ್,

ಪ್ರಮುಖರಾದ ದೇವಪ್ಪ ಪೂಜಾರಿ, ಚಂದ್ರಹಾಶ ಶೆಟ್ಟಿ ನಾರಳ,ಭುಜಂಗ ಕುಲಾಲ್, ನಂದರಾಮ್ ರೈ,ಉಮೇಶ್ ಶೆಟ್ಟಿ,ದುರ್ಗಾದಾಸ್ ಶೆಟ್ಟಿ,ವಸಂತ ಅಣ್ಣಳಿಕೆ, ವೇದನಂದ ಕಾರಂತ, ರಮೇಶ್ ಬಟ್ಟಾಜೆ, ಪವನ್ ಕುಮಾರ್ ಶೆಟ್ಟಿ, ಭಾಸ್ಕರ ಕುಲಾಲ್,ನಿಧಿ ಮಳಲಿ,ರಂಜನ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

By suddi9

Leave a Reply

Your email address will not be published. Required fields are marked *