ಕೈಕಂಬ:ಸ್ವಾಮಿ ಕೊರಗಜ್ಜ ದೈವ ಸಾನಿಧ್ಯ ಮಾದುಕೋಡಿ ಇದರ ವರ್ಷಾವಧಿ ಕೊರಗಜ್ಜನ ಗಗ್ಗರ ಸೇವೆ ಎ.27 ರಂದು ಶನಿವಾರ ಅಮ್ಮುಮಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ನಡೆಯಲಿದೆ.
ಎಪ್ರೀಲ್ 27 ರಂದು ಬೆಳಿಗ್ಗೆ 6;30 ಕ್ಕೆ 12 ಕಾಯಿ ಗಣಹೋಮ , ನವಕಪ್ರದಾನ ಪ್ರಸನ್ನಃ ಪೂಜೆ ನಡೆಯಲಿದ್ದು ಬೆಳಿಗ್ಗೆ 9 ರಿಂದ 11 ರ ತನಕ ಸ್ಥಳಿಯ ಭಜನ ತಂಡದವರಿಂದ ಭಜನ ಕಾರ್ಯಕ್ರಮ ನಡೆಯಲಿದ್ದು ಅಪರಾಹ್ನ 11 ರಿಂದ 1 ರ ತನಕ ಯಕ್ಷ ಗಾನ ವೈಭವ ನಡೆಯಲಿದೆ. ಅಪರಾಹ್ನ 1 ರಿಂದ ಅನ್ನದಾನ ನಡೆಯಲಿದ್ದು 2 ರಿಂದ 4 ರ ವರೆಗೆ ಶ್ರೀ ವಿಠಲ ನಾಯಕ್ ಹಾಗೂ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದ್ದು ರಾತ್ರಿ 7 ರಿಂದ ಕೊರಗಜ್ಜ ಗಗ್ಗರ ಸೇವೆ ನಡೆಯಲಿದೆ.

