ಬಂಟ್ವಾಳ: 106ರ ಹರೆಯದ ಶತಾಯಿಷಿ, ನವವಧು,ವರ ಸಪ್ತಪದಿ ತುಳಿಯುವ ಮುನ್ನ ಹಾಗೂ ವಿವಿಧ ಮತಗಟ್ಟೆಯಲ್ಲಿ ವಿಕಲಚೇತನರು, ವೃದ್ದರು,ಆನಾರೋಗ್ಯ ಪೀಡಿತರು ಮತ ಚಲಾಯಿಸಿರುವುದು ಗುರುವಾರ ಲೋಕಸಭಾ ಚುನಾವಣೆಯಲ್ಲಿ ಕಂಡುಬಂದ ಹೈಲೈಟ್ಸ್.. ತಾಲೂಕಿನ ಪೆರಾಜೆ ಗ್ರಾಮದ ಬಡೆಕೋಡಿ ಕಂಪ ಲಕ್ಷ್ಮಿ (107) ಅವರು ಬೂತ್ ಸಂಖ್ಯೆ 170 ಮತಗಟ್ಟಗೆ ವೀಲ್ ಚೆಯರ್ ನಲ್ಲಿ ಅಗಮಿಸಿ ಯಶಸ್ವಯಾಗಿ ತಮ್ಮ ಹಕ್ಕು ಚಲಾಯಿಸಿದರೆ, ಕೊಯಿಲ ಗ್ರಾಮದ ಮತಗಟ್ಟೆ ಸಂಖ್ಯೆ ೨೭ ರಲ್ಲಿ ನಿವೃತ್ತ ಶಿಕ್ಷಕ 94 ರಹರೆಯದ ಗ್ರೆಗರಿ ಲೋಬೋಅವರು ಕೂಡ ವೀಲ್ ಚೆಯರ್ ನಲ್ಲಿ ಅಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಕಲಚೇತನರು,ವೃದ್ದರು,ಅನಾರೋಗ್ಯಪೀ
ಸಜೀಪ ನಡುಗ್ರಾಮದ ಬೇಂಕೆ ನಿವಾಸಿ ನವವಧು ಪ್ರತಿಜ್ಙಾ ಬೇಂಕೆ ಶಾಲೆಯಲ್ಲಿ,ಬಂಟ್ವಾಳ ನಿತ್ಯಾನಂದ ನಗರದ ರಮ್ಯಾ ಶೆಟ್ಟಿ ಮಂಡಾಡಿ ಶಾಲೆ ,ಕಳ್ಳಿಗೆ ಗ್ರಾಮದ ವಧು ಸರಿತಾ ಕಳ್ಳಿಗೆ ಶಾಲೆ ಹಾಗೂ ಸಮೀತ್ ಪೂಜಾರಿ ತನ್ನ ಭಾವಿ ಪತ್ನಿ ಪ್ರತಿಜ್ಙಾರ ಜೊತೆ ತೆರಳಿ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಬಳಿಕ ಸಪ್ತಪದಿ ತುಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲೊರೆಟ್ಟೋ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಖಿ ಮತಗಟ್ಟೆಯಾಗಿ ಗುರುತಿಸಲಾಗಿದ್ದು,ಬೆಳಿಗ್ಗೆ ಈ ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆಯಿತು. ಈ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.






