ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಮಂಜೇಶ್ವರ ಕರೋಡಾ ಬಳಿ ಆಂಬ್ಯುಲೆನ್ಸ್ ಕಂದಕ್ಕೆ ಉರುಳಿ ಬಿದ್ದಿದ್ದು ಚಾಲಕ ಪಾರಾಗಿದ್ದಾನೆ. ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ದಾಖಲಿಸಿ ಮರಳುತ್ತಿದ್ದ ಕಾಸರಗೋಡು ಜನರಲ್ ಆಸ್ಪತ್ರೆಯ ಆಂಬ್ಯುಲೆನ್ಸ್ ಕರೋಡಾ ಬಳಿ ಎದುರಿನಿಂದ ಬಂದ ಲಾರಿಯೊಂದು ಹೆದ್ದಾರಿಯ ಹೊಂಡ ತಪ್ಪಿಸಲು ಯತ್ನಿಸಿದ್ದು ಈ ಸಂದರ್ಭ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭ ಚಾಲಕ ಸ್ಮಿತಿ ಕಳಕೊಂಡಿದ್ದು ಬೆಳಗ್ಗೆ ಎಚ್ಚರಗೊಂಡಾಗ ಆಂಬ್ಯುಲೆನ್ಸ್ ಮಗುಚಿಬಿದ್ದದ್ದು ಅರಿವಾಗಿದೆ.

