ಮಂಗಳೂರು: ಮಂಗಳೂರಿನ ಫಲ್ನೀರ್-ಯಶ್ರಾಜ್ ಬಾರ್ ಸಮೀಪ ರಿಕ್ಷಾವೊಂದು ಬೈಕ್ ಮೇಲೆ ಹತ್ತಿದ ಪರಿಣಾಮ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಪವಾಡಸದೃಶ್ಯವಾಗಿ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಈ ಘಟನೆಯಲ್ಲಿ ಬೈಕ್ ನುಜ್ಜುಗುಜ್ಜುಗೊಂಡಿದ್ದು, ಅಪಘಾತಕ್ಕೆ ರಿಕ್ಷಾ ಚಾಲಕನ ಅವಾಂತರವೇ ಕಾರಣವೆನ್ನಲಾಗಿದೆ. ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


