bjp
ಮಂಗಳೂರು: ನಗರಪಾಲಿಕೆಯ 5 ವಾರ್ಡ್ಗಳನ್ನು ಸಂಪಕರ್ಿಸುವ ಸುರತ್ಕಲ್ – ಕೃಷ್ಣಾಪುರ ರಸ್ತೆಯಲ್ಲಿ ಮಲ್ಲಮಾರ್ ಕಟ್ಲ ಎಂಬಲ್ಲಿ ಕಿರುಸೇತುವೆಯ ರಚನೆ ಕಾಮಗಾರಿಯು ವರ್ಷದ ಹಿಂದೆ ಚಾಲನೆಗೊಂಡು, ಕುಂಟುತ್ತಾ ಸಾಗಿ, ಪ್ರಸ್ತುತ 6 ತಿಂಗಳಿನಿಂದ ಸ್ತಬ್ಧಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಭಾರತೀಯ ಜನತಾ ಪಾಟರ್ಿ ಸುರತ್ಕಲ್ ನಗರ ಶಕ್ತಿಕೇಂದ್ರದಿಂದ ಮಂಗಳೂರು ಮಹಾನಗರಪಾಲಿಕೆ ಮೇಯರ್ರವರಿಗೆ 16.09.2014ರಂದು ಮನವಿ ಸಲ್ಲಿಸುವುದರ ಮೂಲಕ ಪ್ರತಿಭಟನೆ ಸಲ್ಲಿಸಲಾಯಿತು. ರ್ವೀ
ಈ ಅಪೂರ್ಣ ಕಾಮಗಾರಿಯು ಅಪಾಯವನ್ನು ಆಹ್ವಾನಿಸುತ್ತಿದೆ ಎಂದೂ, ಕೆಲವು ರಸ್ತೆ ಅವಘಢಗಳಿಗೆ ಕಾರಣವಾಗಿದೆಯೆಂದೂ ಮನವಿಯಲ್ಲಿ ವಿವರಿಸಿರುವ ಸಮಿತಿಯು ಕಾಮಗಾರಿಯನ್ನು ಪೂರ್ಣಗೊಳಿಸಲು ನಿರುತ್ಸಾಹವನ್ನು ತೋರುತ್ತಿರುವ ಮಹಾನಗರಪಾಲಿಕೆಯು ಜನತೆಯ ಸಹನೆಯನ್ನು ಅಣಕಿಸುತ್ತಿದೆಯೆಂದು ಟೀಕಿಸಿದೆ. ಸೇತುವೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ಈ ಬಗ್ಗೆ ನಿರ್ಲಕ್ಷ್ಯವನ್ನು ಮುಂದುವರಿಸಿದ್ದಲ್ಲಿ ತೀವ್ರ ಹೋರಾಟದ ಹಾದಿ ತುಳಿಯುವುದಾಗಿ ಎಚ್ಚರಿಕೆ ನೀಡಿದೆ.
ನಿಯೋಗದಲ್ಲಿ ಬಿಜೆಪಿ ಸುರತ್ಕಲ್ ಶಕ್ತಿಕೇಂದ್ರದ ಅಧ್ಯಕ್ಷ ಮಹೇಶ್ ಮೂತರ್ಿ, ಜಿಲ್ಲಾ ಬಿಜೆಪಿ ಕಾರ್ಯದಶರ್ಿ ಅಶೋಕ್ ಕೃಷ್ಣಾಪುರ, ಮಂಡಲ ಕಾರ್ಯದಶರ್ಿ ಶಶಿಕಲಾ ಶೆಟ್ಟಿ, ಯುವಮೋಚರ್ಾ ಉಪಾಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರಮುಖರಾದ ದೇವೇಂದ್ರ ಕೋಟ್ಯಾನ್, ಹರೀಶ್ ಸುವರ್ಣ, ರಾಕೇಶ್ ಕೋಟ್ಯಾನ್, ಹರಿಪ್ರಸಾದ್, ಗಣೇಶ್ ಕಾಟಿಪಳ್ಳ, ಮುಂತಾದವರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *