ಬಜ್ಪೆ: ಗುರುಪುರ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದು ಕೆಂಜಾರಿನ ಪಡು ಎಂಬಲ್ಬಲಿ ಬುಧವಾರದಂದು ಪತ್ತೆಯಾಗಿದೆ.
ಈ ಶವ ಶವ ಜ್ಯೋತಿನಗರ ನಿವಾಸಿ ಬಸವರಾಜ್ (33) ಅವರದಾಗಿರಬಹುದೆಂದು ಶಂಕಿಸಲಾಗಿದೆ, ಇವರು ಮಂಗಳವಾರ ಸಾಯಂಕಾಲದಿಂದ ನಾಪತ್ತೆಯಾಗಿದ್ದರು. ಈ ಕುರಿತಾಗಿ ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ಸಹ ದಾಖಲಾಗಿತ್ತು.
ಈ ಶವವನ್ನು ಇನ್ನಷ್ಟೇ ಹೊಳೆಯಿಂದ ಹೊರತೆಗೆಯಬೇಕಾಗಿದ್ದು, ಬಜ್ಪೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

