ವಿಟ್ಲ: ಜೆಸಿಐ ವಿಟ್ಲ ಮತ್ತು ಅನುಯಾಶ್ ಹೆಲ್ತ್ ಫೌಂಡೇಶನ್ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ದಿನಾಚರಣೆ 2019 ಇದರ ಪ್ರಯುಕ್ತ ಉಚಿತ ರಕ್ತ ಮಧುಮೇಹ ತಪಾಸಣಾ ಶಿಬಿರವನ್ನು ವಿಟ್ಲದ ಪುಷ್ಪಕ್ ಹೆಲ್ತ್ ಸೆಂಟರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುಷ್ಪಕ್ ಹೆಲ್ತ್ ಸೆಂಟರಿನ ಡಾ| ವಿ ಕೆ ಹೆಗ್ಡೆ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ವಲಯ 15ರ ಉಪಾಧ್ಯಕ್ಷ ರಾಯನ್ ಕ್ರಾಸ್ಟಾ ಭಾಗವಹಿಸಿದ್ದರು. ಜೆಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಪೂವಾಧ್ಯಕ್ಷರುಗಳಾದ ಸೋಮಶೇಖರ್ ಮತ್ತು ಮೋನಪ್ಪ ಶೆಟ್ಟಿ, ಸದಸ್ಯರುಗಳಾದ ಮಲ್ಲಿಕಾ, ಅಕ್ಶತ್ ಕುಮಾರ್, ಚಂದ್ರಹಾಸ ಮುದಲಾದವರು ಉಪಸ್ಥಿತರಿದ್ದರು. ಸುಮಾರು 75 ಜನ ಇದರ ಸದುಪಯೋಗ ಪಡೆದುಕೊಂಡರು.

