ಬಂಟ್ವಾಳ: ತುಂಬೆ ಗ್ರಾಮದ ಪೆರಿಯೋಡಿಬೀಡು ಗದ್ದೆಯಲ್ಲಿ ‘ಶ್ರೀರಾಮ ನಾಮ ತಾರಕ ಜಪಯಜ್ಞ’ ಕ್ಕೆ ಆಕರ್ಷಕ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಎ. 7ರಂದು ರಾಮನಾಮ ತಾರಕ ಜಪಯಜ್ಞ ಎ. 5ರಂದು ಆಕರ್ಷಕ ಹೊರೆಕಾಣಿಕೆ ಮೆರವಣಿಗೆ. ತುಂಬೆ ಗ್ರಾಮದ ಪೆರಿಯೋಡಿಬೀಡು ಗದ್ದೆಯಲ್ಲಿ ಇಲ್ಲಿನ ಐದು ಗ್ರಾಮಗಳಿಗೆ ಸಂಬಂಧಿಸಿದಂತೆ ಲೋಕ ಕಲ್ಯಾಣಕ್ಕಾಗಿ ಇದೇ ಎ.7ರಂದು ಬೆಳಿಗ್ಗೆ ‘ಶ್ರೀರಾಮ ನಾಮ ತಾರಕ ಜಪಯಜ್ಞ’ ಏರ್ಪಡಿಸಲಾಗಿದ್ದು, ಇದರಲ್ಲಿ ಒಟ್ಟು 432 ಕುಟುಂಬ ಸೇರಿದಂತೆ ಒಟ್ಟು 7ಸಾವಿರಕ್ಕೂ ಮಿಕ್ಕಿ ಮಂದಿ ಭಕ್ತರು ಭಾಗವಹಿಸುವರು ಎಂದು ಸಮಿತಿ ಅಧ್ಯಕ್ಷ ಟಿ.ತಾರನಾಥ ಕೊಟ್ಟಾರಿ ಹೇಳಿದ್ದಾರೆ. ಇಲ್ಲಿನ ಪೆರಿಯೋಡಿಬೀಡು ಗದ್ದೆಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇಎ. 5ರಂದು (ಇಂದು) ಸಂಜೆ ಫರಂಗಿಪೇಟೆಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು. ಕಳೆದ 3 ವರ್ಷಗಳ ಹಿಂದೆ ಆರಂಭಿಸಲಾದ ಈ ಕಾರ್ಯಕ್ರಮವು ಇಲ್ಲಿನ ಕಳ್ಳಿಗೆ, ತುಂಬೆ, ಪುದು, ಕೊಡ್ಮಾಣ್, ಮೇರಮಜಲು ಗ್ರಾಮಗಳ ಭಕ್ತರಲ್ಲಿ ಧಾರ್ಮಿಕ ಮೂಡಿಸುವುದರ ಜೊತೆಗೆ ಪ್ರತೀ ಮನೆಯಲ್ಲಿ ಶ್ರೀರಾಮ ನಾಮ ಜಪ ಪಠನೆ ಮೂಲಕ ಸುಸಂಸ್ಕøತ ಸಮಾಜ ನಿರ್ಮಿಸಲಾಗುತ್ತಿದೆ.
ಈಗಾಗಲೇ ಕಳೆದ 21 ದಿನಗಳಲ್ಲಿ ಒಟ್ಟು 1 ಕೋಟಿ ರಾಮ ಜಪ ನಡೆಸಲಾಗಿದ್ದು, ಅಂದು ವೃತಧಾರಿಗಳು ಯಜ್ಞಕುಂಡಕ್ಕೆ ಸ್ವತಃ ಹವಿಸ್ಸು ಸಮರ್ಪಿಸುವರು. ಇದಕ್ಕಾಗಿ ಒಟ್ಟು 10 ಯಜ್ಞಕುಂಡ ಸಿದ್ಧಪಡಿಸಲಾಗಿದ್ದು, ಪ್ರಧಾನ ಯಜ್ಞಕುಂಡದಲ್ಲಿ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾರ್ಗದರ್ಶನದಲ್ಲಿ ಜಪಯಜ್ಞ ನಡೆಯಲಿದೆ. ಈಗಾಗಲೇ ಒಂದು ಎಕರೆ ಜಮೀನಿನಲ್ಲಿ ಪೆಂಡಾಲ್ ನಿರ್ಮಿಸಲಾಗಿದ್ದು, ಒಟ್ಟು 480 ಮಂದಿ ಸಮವಸ್ತ್ರಧಾರಿ ಸ್ವಯಂ ಸೇವಕರು ಸಹಕರಿಸಲಿದ್ದಾರೆ ಎಂದು ಅವರು ವಿವರಿಸಿದರು.ಅಂದು ಬೆಳಿಗ್ಗೆ 11 ಗಂಟೆಗೆ ಪೂರ್ಣಾಹುತಿ ಬಳಿಕ ನಡೆಯುವ ಸುಧರ್ಮ ಸಭೆಯಲ್ಲಿ ಮಂಗಳೂರು ಮಂಗಳಾದೇವಿ ದೇವಳದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಭಾಗವಹಿಸಲಿದ್ದು, ಪುತ್ತೂರು ಜಗದೀಶ ಆಚಾರ್ಯ ಇವರಿಂದ ಭಕ್ತಿಗಾನ ವೈಭವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ದಾಮೋದರ ನೆತ್ರಕೆರೆ, ಗೌರವ ಸಲಹೆಗಾರ ಪ್ರಕಾಶ್ಚಂದ್ರ ರೈ ದೇವಸ್ಯ, ಎಂ.ಆರ್.ನಾಯರ್, ಪ್ರಮುಖರಾದ ಪ್ರವೀಣ ಕುಮಾರ್ ಜ್ಯೋತಿಗುಡ್ಡೆ, ಪದ್ಮನಾಭ ರಾವ್, ದಿನೇಶ ಶೆಟ್ಟಿ ಕೊಟ್ಟಿಂಜ, ನವೀನ್ ಜ್ಯೋತಿಗುಡ್ಡೆ, ಯೋಗೀಶ್ ಬ್ರಹ್ಮರಕೂಟ್ಲು, ದಯಾನಂದ ಜಾರಂದಗುಡ್ಡೆ, ಚೇತನ್ ಮುಂಡಾಜೆ, ಪದ್ಮನಾಭ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

