ಬಂಟ್ವಾಳ:  ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ದೇವರಮಾರುಗದ್ದೆ ಎಂಬಲ್ಲಿ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ 8ನೇ ವಾರ್ಷಿಕೋತ್ಸವ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ಮಂಗಳಾದೇವಿ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಭೂಸೇನೆ ಯೋಧ ಅರುಣ್ ಕುಮಾರ್ ಶೆಟ್ಟಿ ಧರ್ಮಸ್ಥಳ ಇವರನ್ನು ಸನ್ಮಾನಿಸಲಾಯಿತು.ದೇಶದಲ್ಲಿ ರಾಷ್ಟ್ರಭಕ್ತಿ ಜೊತೆಗೆ ಗುರುಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಸಂಸ್ಕಾರಯುತ ಜೀವನ ನಡೆಸಲು ಗ್ರಾಮೀಣ ಅವಿಭಕ್ತ ಕುಟುಂಬದ ಮೂಲಕ ಮೌಲ್ಯದಾಯಕ ಸಂದೇಶ ಜಗತ್ತಿಗೆ ರವಾನೆಯಾಗಿದೆ. ಸರ್ವರಿಗೂ ಒಳಿತನ್ನೇ ಬಯಸುವ ಭಾರತೀಯರ ಯೋಗ ಮತ್ತು ನಾಯಕತ್ವಕ್ಕೆ ಪ್ರಸಕ್ತ ಜಗತ್ತಿನಲ್ಲಿ ಮನ್ನಣೆ ದೊರೆತಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೇಶವ ಬಂಗೇರ ಗೇರುಕಟ್ಟೆ ಹೇಳಿದ್ದಾರೆ. ಇಲ್ಲಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ದೇವರಮಾರುಗದ್ದೆ ಎಂಬಲ್ಲಿ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ 8ನೇ ವಾರ್ಷಿಕೋತ್ಸವ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ಮಂಗಳಾದೇವಿ ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

4btl-Amtady

ಪ್ರತಿಯೊಂದು ಮನೆಯಿಂದ ರಾಷ್ಟ್ರನಾಯಕರು ಮತ್ತು ಯೋಧರನ್ನು ಸಿದ್ಧಗೊಳಿಸುವ ಅಗತ್ಯವಿದ್ದು, ಭಾರತೀಯ ಯೋಧರ ಸಾಮಥ್ರ್ಯ ಪ್ರಸಕ್ತ ಎಲ್ಲೆಡೆ ಗಮನ ಸೆಳೆದಿದೆ ಎಂದರು. ಮಾಣಿಲ ಶ್ರೀಧಾಮ ಸೇವಾ ಸಮಿತಿ ಸಂಚಾಲಕ ಮಚ್ಚೇಂದ್ರ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಭೂಸೇನೆ ಯೋಧ ಅರುಣ್ ಕುಮಾರ್ ಶೆಟ್ಟಿ ಧರ್ಮಸ್ಥಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾಪೋಷಕ ಶೇಖರ ಶೆಟ್ಟಿ ಅಮ್ಟಾಡಿ ಇವರನ್ನು ಮಂಗಳಾದೇವಿ ಮೇಳದ ವತಿಯಿಂದ ಸನ್ಮಾನಿಸಿದರು.  ಮಂಗಳೂರು ದುರ್ಗಾವಾಹಿನಿ ಮಹಿಳಾ ಘಟಕ ಸಂಚಾಲಕಿ ವಿದ್ಯಾ ಮಲ್ಯ ಮಾತನಾಡಿ, ಮಹಿಳೆಯರು ಆಧುನಿಕತೆಗೆ ಆಕರ್ಷಿತರಾಗುವ ಬದಲಾಗಿ ಮಾನವೀಯತೆ ಮತ್ತು ಸುಸಂಸ್ಕøತ ಸಾಂಪ್ರದಾಯಿಕ ಶೈಲಿ ಮರೆಯಬಾರದು ಎಂದರು. ಮೇಳದ ವ್ಯವಸ್ಥಾಪಕ ಐತಪ್ಪ ವರ್ಕಾಡಿ, ಹಿರಿಯ ಕಲಾವಿದರಾದ ಕೆ.ಎಚ್.ದಾಸಪ್ಪ ರೈ, ತಾರನಾಥ ವರ್ಕಾಡಿ ಶುಭ ಹಾರೈಸಿದರು. ಹಿಂದೂ ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡು, ವಲಯ ಹಿಂದೂ ಮಹಿಳಾ ವೆದಿಕೆ ಅಧ್ಯಕ್ಷೆ ಬಬಿತಾ ಕೋಟ್ಯಾನ್, ವಕೀಲರಾದ ಉಮೇಶ ಕುಮಾರ್ ವೈ., ಶಿವಾನಂದ ಎಂ.ವಿಟ್ಲ, ಉದ್ಯಮಿ ಕೆ.ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಯಶೋಧರ ಪೊಳಲಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಶೆಟ್ಟಿ, ಚಂದ್ರಾವತಿ ನಾಯ್ಕ್, ಮೋಹಿನ ನಾಯ್ಕ್ ಮತ್ತಿತರರು ಇದ್ದರು. ಸಂಘಟಕ ಶೇಖರ ಶೆಟ್ಟಿ ಅಮ್ಟಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಶೆಟ್ಟಿ ಮಾಣಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *