ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಉರ್ಬನ ಎಂಬಲ್ಲಿ ರಾತ್ರಿ ವೇಳೆ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಆರೋಪಿಗಳಾದ ಆರೋಪಿಗಳಾದ ಸ್ಥಳೀಯ ನಿವಾಸಿ ದಿನೇಶ್ ಮತ್ತು ಆನಂದ ಎಂಬವರನ್ನು ಅರಣ್ಯ ಇಲಾಖಾಧಿಕಾರಿಗಳು ಸೋಮವಾರ ವಶಕ್ಕೆ ತೆಗೆದುಕೊಂಡರು. ವಲಯ ಅರಣ್ಯಾಧಿಕಾರಿ ಎನ್.ಸುಬ್ರಹ್ಮಣ್ಯ ರಾವ್, ಎಂ.ಬಿ.ಪೂವಪ್ಪ, ಸೀತಾರಾಮ ಶೆಟ್ಟಿ, ವಿನಯ ಕುಮಾರ್, ಭಾಸ್ಕರ್, ಜಯಪ್ರಕಾಶ್ ಕಾಯರ್ಾಚರಣೆಯಲ್ಲಿ ಪಾಲ್ಗೊಂಡಿದ್ದರು.

