ಕುಪ್ಪೆಪದವು:ಕುಪ್ಪೆಪದವು,ಕಿಲೆಂಜಾರ್,ಮುತ್ತೂರು,ಕುಳವೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಶ ಬಿ.ಸುರೇಂದ್ರ ಕಂಬಳಿ ಇವರ ಅದ್ಯಕ್ಷತೆಯಲ್ಲಿ ಜರಗಿತು.

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಯವರನ್ನು ವಿಜಯಗೊಳಿಸಲು ಶಕ್ತಿಮೀರಿ ಪ್ರಯತ್ನಿಸಲು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.
ಪ್ರಾರಂಭದಲ್ಲಿ ವಲಯ ಅಧ್ಯಕ್ಷ ರಾಮಚಂದ್ರ ಸಾಲಿಯಾನ್ ಸ್ವಾಗತಿಸಿದರೆ, ಪಕ್ಷದ ವಕ್ತಾರ ಅಬ್ದುಲ್ ಅಝೀಜ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅಬೂಬಕ್ಕರ್ ಕಲ್ಲಾಡಿ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಹಸನ್ ಬಾವ, ಅಬ್ದುಲ್ ಅಝೀಜ್, ಅನ್ವರ್ ಸಾದಾತ್, ಬಷೀರ್ ಕರಾಯ, ಇರ್ಫಾನ್ ಹಕ್, ಇಂತಿಯಾಜ್, ಸುಲೈಮಾನ್, ಸ್ಟೀವ್ ಲೋಬೊ, ಜೋಸೆಫ್ ಮೊದಲಾದವರು ಉಪಸ್ಥಿತರಿದ್ದರು.
