ಬಂಟ್ವಾಳ : ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಾಗನವಳಚ್ಚಿಲು-ಮಾರ್ನಬೈಲಿನ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ 46 ವರ್ಷದ ಯಕ್ಷಗಾನ ಬಯಲಾಟದಲ್ಲಿ ನವಜೀವನ ವ್ಯಾಯಾಮ ಶಾಲೆ (ರಿ) ಮಾರ್ನಬೈಲ್ ಇದರ ಸಹಯೋಗದೊಂದಿಗೆ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಹಣತೆ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿಲಾಯಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಡಾ| ಎಚ್. ಪಿ. ಸಪಲಿಗ ನಾಗನವಳಚ್ಚಿಲು, ವ್ಯಾಯಾಮಶಾಲೆಯ ಶಿಕ್ಷಕ ಗಣೇಶ್ ಪುರುಷ, ವ್ಯಾಯಾಮಶಾಲೆಯ ಅಧ್ಯಕ್ಷರಾದ ಲ್ಯಾನ್ಸಿ ಪಿಂಟೋ, ಕೇಶವ ಮಾಸ್ತರ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

