ಸಕ್ತ ಶೈಕ್ಷಣಿಕ ಕಾಲಘಟ್ಟದಲ್ಲಿ ಸ್ಪಾರ್ಧತ್ಮಕ ಪರೀಕ್ಷೆ ಎದುರಿಸಲು ಆಂಗ್ಲ ಭಾಷೆ ಕಲಿಕೆ ಮತ್ತು ಭಾಷಾ ಕೌಶಲ್ಯ ಅಗತ್ಯವಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥ ಡಾ.ಶಂಕರನಾರಾಯಣ ಹೇಳಿದ್ದಾರೆ.
ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆತಂರಿಕ ಗುಣಮಟ್ಟ ಭರವಸೆ ಕೋಶ ಮತ್ತು ಆಂಗ್ಲ ಭಾಷಾ ವಿಭಾಗ ವತಿಯಿಂದ ಶನಿವಾರ ಏರ್ಪಡಿಸಿದ್ದ ’ಸಂವಹನ ಆಂಗ್ಲಭಾಷೆ’ ಒಂದು ದಿನದ ಕಾರ್ಯಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
17btl-English
ಕಾಲೇಜಿನ ಪ್ರಾಂಶುಪಾಲ ಪ್ರೊ.ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಮೌಖಿಕ ಮತ್ತು ಬರವಣಿಗೆ ಆಂಗ್ಲ ಭಾಷಾ ಸಂವಹನ ಕೌಶಲ್ಯ ಹಾಗೂ ಉದ್ಯೋಗ ತಯಾರಿ ಬಗ್ಗೆ ಮಾಹಿತಿ ನೀಡಲಾಯಿತು.
ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕ ಡಾ.ಶಶಿಕಾಂತ ಕುರೋಡಿ, ಆಂತರಿಕ ಗುಣಮಟ್ಟ ಭರವಸಾ ಕೋಶ ಸಂಯೋಜಕ ಡಾ.ರವಿ.ಎಂ.ಎನ್. ಮತ್ತಿತರರು ಇದ್ದರು.
ಆಂಗ್ಲಭಾಷಾ ವಿಭಾಗ ಉಪನ್ಯಾಸಕ ಡಾ.ರವೀಂದ್ರನ್ ಟಿ.ಕೆ. ಪ್ರಾಸ್ತವಿಕ ಮಾತಾನಾಡಿ, ಕಾರ್ಯಾಗಾರ ಮಹತ್ವ ಬಗ್ಗೆ ತಿಳಿಸಿದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಪ್ರೊ.ವಿದ್ಯಾ ಕೆ.ಎಸ್. ಸ್ವಾಗತಿಸಿ, ಉಪನ್ಯಾಸಕ ಸುರೇಶ್ ಡಿ. ವಂದಿಸಿದರು. ಜೋಲನ್ ಮುಂಡ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *