ಕೊಳ್ನಾಡು ಸಾಲೆತ್ತೂರು ಸರ್ವ ಧರ್ಮೀಯರಿಂದ ಕಾಶ್ಮೀರದ ಪುಲ್ವಾರದಲ್ಲಿ ನಡೆದ ಭಯೋತ್ಪಾದನಾ ಕ್ರತ್ಯಯಕ್ಕೆ ಬಲಿಯಾದ ದೀರ ಯೋಧರಿಗೆ ಮೌನ ಪ್ರಾರ್ಥನೆ, ಮೊಂಬತ್ತಿ ಬೆಳಗಿಸಿ, ರಾಷ್ಟ ಗೀತೆಯ ಮೂಲಕ ಸೆಲ್ಯೂಟ್ ನೀಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.*
*ಸಾಲೆತ್ತೂರಿನ ಸರ್ಕಲ್ ಸಮೀಪ ಸೇರಿದ ಜನ ಸಾಗರ ಮಡಿದ ವೀರ ಯೋಧರಿಗೆ ಮೌನ ಪ್ರಾರ್ಥನೆ ಮತ್ತು ಮೊಂಬತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು .*ಕಾಶ್ಮೀರದಲ್ಲಿ ನಡೆದ ಏಯ್ಯ ಕ್ರತ್ಯವನ್ನು ಒಕ್ಕರಲಿನಿಂದ ಸಭೆಯು ಖಂಡಿಸಿತು*
ಈ ಒಂದು ಶ್ರದ್ಧಾಂಜಲಿ ಸಮರ್ಪಣೆಯಲ್ಲಿ ಸಾಲೆತ್ತೂರು ಕೇಂದ್ರ ಜುಮಾ ಮಸೀದಿ ಖತೀಬರಾದ ಮಜೀದ್ ದಾರಿಮಿ ಕುಂಬ್ರ ಸಾಲೆತ್ತೂರು ಚರ್ಚಿನ ಗುರುಗಳಾದ ಪಾದರ್ ಹೆನ್ರಿ ಡಿ ಸೋಜ, ಹಿರಿಯ ವ್ಯಧ್ಯರಾದ ಶ್ರೀ ರಾಮ ಚಂದ್ರ ಶಾಸ್ತ್ರಿ ಪಡಾರ್, ಪಂಚಾಯತ್ ಅಧ್ಯಕ್ಷರಾದ ಸುಬಾಶ್ಚಂದ್ರ ಶೆಟ್ಟಿ ಕುಲಾಲು, ಉದ್ಯಮಿ ಮಾದವ ಮಾವೆ, ಕೊಳ್ನಾಡು ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಂ.ಃ., ಮಹಮ್ಮದ್ ಮಂಚಿ, ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಸಾಲೆತ್ತೂರು ಜುಮಾ ಮಸೀದಿ ಅಧ್ಯಕ್ಷರಾದ ಖಾದರ್ ಸಾಲೆತ್ತೂರು, ಸಾಲೆತ್ತೂರು, ಚರ್ಚ್ ಉಪಾಧ್ಯಕ್ಷ ಪೆಲೀಕ್ಸ್ ವೇಗಸ್, ಮತ್ತಿತರರು ಉಪಸ್ಥಿತರಿದ್ದರು.
ಜಾನ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.
ಬಶೀರ್ ಕೊಳ್ನಾಡು ವಂದಿಸಿದರು.

