ಬಂಟ್ವಾಳ ಜೈನ್ ಮಿಲನ್ ಆಶ್ರಯದಲ್ಲಿ ಬಂಟ್ವಾಳ ಬೈಪಾಸ್ ಬಳಿ ನಡೆಯುತ್ತಿರುವ “ಚಿಣ್ಣರ ಮಿಲನ ಚಾವಡಿ” ಎಂಬ ಸಂಗೀತ, ನೃತ್ಯ, ಯಕ್ಷಗಾನ ಹಾಗೂ ಕರಾಟೆ ಮಕ್ಕಳ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸುವುದಕ್ಕಾಗಿ ತರಬೇತಿ ಕಾರ್ಯಗಾರವನ್ನು ನಡೆಸುತ್ತಿದ್ದು, ಅದರ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 09-02-2019 ರಂದು ಬಿ.ಸಿ.ರೋಡ್ ಸ್ಪರ್ಶಕಲಾ ಮಂದಿರದಲ್ಲಿ ಜರಗಿತು ಎಂದು ತರಬೇತಿ ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಜೈನ್ ತಿಳಿಸಿರುತ್ತಾರೆ. ಬಂಟ್ವಾಳ ಜೈನ್ ಮಿಲನ್‍ನ ಫೆಬ್ರವರಿ ತಿಂಗಳ ಮಾಸಿಕ ಸಭೆಯು ಇದೇ ಸಂದರ್ಭದಲ್ಲಿ ಜರಗಿದ್ದು, ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ವೀರ್ ಬಿೃಜೇಶ್ ಜೈನ್ ಇವರು ವಹಿಸಿದ್ದರು.

KAR_8678ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ಜೈನ್ ಮಿಲನ್ ವಲಯ 8 ರ ಕಾರ್ಯದರ್ಶಿ ವೀರ್ ರಾಜೇಶ್ ಬಿ. ಇವರು ಮಾತನಾಡುತ್ತಾ, ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅದನ್ನು ಅಭಿವ್ಯಕ್ತಗೊಳಿಸುವ ಕಾರ್ಯ ಶ್ಲಾಘನೀಯ ಎಂದು ತಿಳಿಯಪಡಿಸಿದರು. ಮಕ್ಕಳಿಗೆ ತರಬೇತಿಯನ್ನು ನೀಡುತ್ತಿರುವ ಶ್ರೀಮತಿ ಚಂದನಾ ಬಿ. (ಸಂಗೀತ), ಕು| ಶುೃತಿ ಡಿ. ದಾಸ್ (ಯಕ್ಷಗಾನ) ಹಾಗೂ ಶ್ರೀ ಅಶೋಕ್ ಆಚಾರ್ಯ (ಕರಾಟೆ) ಇವರುಗಳನ್ನು ಈ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಗೌರವಾರ್ಪಣೆ ಪತ್ರವನ್ನು ಶ್ರೀಮತಿ ಸನ್ಮತಿ ಜೆ. ಇಂದ್ರ, ಶ್ರೀಮತಿ ಚಂದ್ರಮ ಮಹಾವೀರ್ ಇವರು ವಾಚಿಸಿದರು. ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಅಧ್ಯಕ್ಷ ವೀರ್ ಸುದರ್ಶನ್ ಜೈನ್, ಕಾರ್ಯದರ್ಶಿ ವೀರ್ ಸುಭಾಶ್ಚಂದ್ರ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೀರಾಂಗನಾ ವಂದನ ಚೌಟ ಅಮ್ಟೂರು ಸ್ವಾಗತಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಗೀತಾ ಜಿನಚಂದ್ರ, ಆತಿಥೇಯರಾದ ಮಮತಾ ಎ. ಜೈನ್, ಶಿಲ್ಪಾ ಮನ್ಮಥ್ ರಾಜ್ ಉಪಸ್ಥಿತರಿದ್ದರು. ಕೋಶಧಿಕಾರಿ ಚಂದ್ರಕಾಂತ್ ಜೈನ್ ವಂದಿಸಿದರು, ಕಾರ್ಯಕ್ರಮವನ್ನು ನ್ಯಾಯವಾದಿ ವೀರ್ ಶಿವಪ್ರಕಾಶ್ ಇವರು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *