ಪೊಳಲಿ:ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿ ವತಿಯಿಂದ ಪೊಳಲಿ ಶ್ರೀದುರ್ಗಾ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಮಾಜದ ಸೇವೆಯೊಂದಿಗೆ ಇಲ್ಲಿಯ ಕುಲಾಲ ಸಮಾಜ ಬಾಂದವರ ವತಿಯಿಂದ ಶ್ರೀಮಹಾಗಣಪತಿ ಹಾಗೂ ಶ್ರೀ ಭದ್ರಕಾಳಿ ದೇವರ ದಾರಂದ ಮತ್ತು ಬಾಗಿಲುಗಳಿಗೆ ರಜತ ಹೊದಿಕೆಯನ್ನು ಸುಮಾರು 27 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಜತಹೊದಿಕೆಯ ಸಮರ್ಪಣಾ ಸಮಾರಂಭವು ಫೆ.17 ರಂದು ಭಾನುವಾರ ನಡೆಯಲಿದೆ.

IMG-20190212-WA0000

ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಶ್ರೀ ರವಿ ನಡುಬೊಟ್ಟು ಅವರ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಗೆ ಬಿ.ಸಿರೋಡು ರಕ್ತೇಶ್ವರೀ ದೇವಸ್ಥಾನದಿಂದ ವಾಹನ ಜಾಥದ ಮೂಲಕ ಶ್ರೀ ಕ್ಷೇತ್ರ ಪೊಳಲಿಗೆ ಸಮರ್ಪಿಸಲಿದ್ದಾರೆ.

ಕುಲಾಲ ಸಮುದಾಯದ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿಯ ಗೌರವಾಧ್ಯಕ್ಷ ಆರ್ ಕೆ. ಪ್ರಥ್ವಿರಾಜ್ ಎಡಪದವು, ಅಧ್ಯಕ್ಷ ಸುಂದರ ಬಿ. ಬಂಗೇರ ಅದ್ಯಪಾಡಿ, ಪ್ರ. ಕಾರ್ಯದರ್ಶಿ ಪ್ರಮೀಳಾ ಎಂ. ಮಾಣೂರು, ಕೋಶಾಧಿಕಾರಿ ಮೋಹನ್ ಮಳಲಿ, ರಾಘವ ಮಣೇಲ್, ಉಪಾಧ್ಯಕ್ಷರಾದ ಸುಜೀರ್ ಶ್ರೀಧರ್ ಕುಡುಪು, ದಿವಾಕರ ಪಂಬದಬೆಟ್ಟು,ನಾರಾಯಣ ಸಿ.ಪೆರ್ನೆ, ಯಶೋಧರ ಪೊಳಲಿ ಕಲ್ಕುಟ, ಚಂದ್ರಹಾಸ್ ಪಲ್ಲಿಪಾಡಿ, ಶಿವಾನಂದ ಮುತ್ತೂರು, ಜೊತೆ ಕಾರ್ಯದರ್ಶಿಗಳಾದ ಭಾರತಿ ಶೇಷಪ್ಪ ತುಂಬೆ, ವಿದ್ಯಾಉಮೇಶ್ ಮೂಲ್ಯ, ಗೌರವ ಸಲಹೆಗಾರರಾದ ಸೀತಾರಾಮ ಕುಲಾಲ್ ಮಳಲಿ, ಮಹಾಬಲ ಕುಲಾಲ್,ಸದಾಶಿವ ಬಿಜೈ, ಶಿವಪ್ಪ ಬಂಗೇರ ಅಧ್ಯಪಾಡಿ, ಶ್ರೀಧರ ಪಲ್ಲಿಪಾಡಿ, ಟಿ. ಶೇಷಪ್ಪ ಮೂಲ್ಯತುಂಬೆ, ಗೋಪಾಲ ಫರಂಗಿಪೇಟೆ ಹಾಗೂ ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು , ಭಕ್ತಾಧಿಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ  ಅಗಮಿಸಲಿದೆ.

By suddi9

Leave a Reply

Your email address will not be published. Required fields are marked *