ಕೈಕಂಬ: ಗುರುಪುರ ಶ್ರೀ ಜಂಗಮ ಮಠ-ಸಂಸ್ಥಾನದಲ್ಲಿ ಮಂಗಳವಾರ ಮುಂಜಾನೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ಇದರ ಕಾವೇಶ್ವರ ಉಪ-ವಲಯದ ವತಿಯಿಂದ `ರಥಸಪ್ತಮಿ’ ಪ್ರಯುಕ್ತ `108 ಸೂರ್ಯ ನಮಸ್ಕಾರ’ ಕಾರ್ಯಕ್ರಮ ನಡೆಯಿತು. ಮಠದ ಸದಾಶಿವಯ್ಯ ದೀಪ ಬೆಳಗಿಸಿ ಬೃಹತ್ ಯೋಗ ಶಿಕ್ಷಣ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗುರುಪುರ, ಪೊಳಲಿ, ಕಾಜಿಲ, ಕೈಕಂಬ, ಕುಪ್ಪೆಪದವು, ಎಡಪದವು, ಅಮ್ಮುಂಜೆ, ಪಳ್ಳಿಪಾಡಿ, ಮಿಜಾರು, ನಾಡಾಜೆ, ಬೆಳ್ಳೂರು ಮೊದಲಾಗಿ 14 ಗ್ರಾಮಾಂತರ ಶಾಖೆಗಳ ಸುಮಾರು 300ರಷ್ಟು ಹಿರಿ-ಕಿರಿಯ ಯೋಗಪಟುಗಳು ಭಾಗವಹಿಸಿದ್ದರು.
ಕಾವೇಶ್ವರ ಉಪ-ವಲಯ ಸಂಚಾಲಕ ಲೋಕೇಶ್, ಜಿಲ್ಲಾ ಸೇವಾ ಪ್ರಮುಖ ಭರತ್, ಜಿಲ್ಲಾ ಸಂಘಟನಾ ಪ್ರಮುಖ ಶಿಪ್ರಸಾದ್, ಜಿಲ್ಲಾ ಸೇವಾ ಮಾರ್ಗದರ್ಶಕ ಕೇಶವ, ವಲಯ ಸಂಚಾಲಕ ಮಹೇಶ್, ಉಮೇಶ್, ದಿವಾಕರ, ಕೃಷ್ಣ ಸಾಲ್ಯಾನ್, ಶ್ಯಾಮರಾಯ ಆಚಾರ್ಯ, ಶಂಕರ್ ಶೆಟ್ಟಿ ಗುರುಪುರ, ಪ್ರಶಾಂತ, ದೊಡ್ಡಯ, ಪ್ರೇಮನಾಥ, ಮಮತಾ, ಮಾತೆಯರ ವಿಭಾಗದ ರೇಖಾ, ಶಶಿರಾಜ್ ಪೊಳಲಿ, ವಲಯ ವಿಸ್ತರಣಾ ಪ್ರಮುಖ ಸತೀಶ, ಮಕ್ಕಳ ಶಿಕ್ಷಣ ಪ್ರಮುಖ ಜನಾರ್ದನ, ಯಶವಂತ ಕೋಟ್ಯಾನ್, ಪುರಂದರ ಮಲ್ಲಿ, ವಿಶ್ವಾನಂದ ಕುಳವೂರು ಮೊದಲಾದವರಿದ್ದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ವಂದಿಸಿದರು.
