ಅಡ್ಡೂರು : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಕಳಸಗುರಿ ಹತ್ತಿರದ ಕುಚ್ಚಿಗುಡ್ಡೆ ಎಂಬಲ್ಲಿ ಫೆ. 13ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ನೂತನ ಅಂಗನವಾಡಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಯಶವಂತ ಶೆಟ್ಟಿ, ಹನೀಫ್, ಜಯಲಕ್ಷ್ಮೀ, ಎ ಕೆ ಅಶ್ರಫ್, ತಾಪಂ ಸದಸ್ಯ ಸಚಿನ್ ಅಡಪ ಹಾಗೂ ಎ ಕೆ ರಿಯಾಜ್, ಟಿ. ಅಹ್ಮದ್ ಬಾವ, ಎ ಕೆ ಮೊಹಮ್ಮದ್, ಪಂಚಾಯತ್ ಕಾರ್ಯದರ್ಶಿ ನಿತ್ಯಾನಂದ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ನೂತನ ಅಂಗನವಾಡಿ ಕಟ್ಟಡಕ್ಕೆ ಜಿಪಂ ಐದು ಲಕ್ಷ ರೂ ಹಾಗೂ ಉದ್ಯೋಗ ಖಾತ್ರಿ ಯೋಜನೆಯಿಂದ ಅನುದಾನ ಲಭಿಸಲಿದ್ದು, ಇದು ಒಟ್ಟು 13 ಲಕ್ಷ ರೂ ಅಂದಾಜು ವೆಚ್ಚದ ಕಟ್ಟಡವಾಗಲಿದೆ ಎಂದು ಯು ಪಿ ಇಬ್ರಾಹಿಂ ತಿಳಿಸಿದರು.
