ಬಂಟ್ವಾಳ : ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ. ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿಗಳಾದ ಮಂಜ ನಾಯ್ಕ ಎನ್., ಮತ್ತು ಸಾಯಿರಾಮ್ ಪವಾರ್ ಎ.ಡಿ.ಎಚ್ ರವರ ಬೀಳ್ಕೊಡುಗೆ ಸಮಾರಂಭವು ಬ.ವಿಭಾಗೀಯ ಕಚೇರಿ ಆವರಣದಲ್ಲಿ ಜರಗಿತು. ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಮಂಜಪ್ಪರವರು ಸನ್ಮಾನಿಸಿದರು. ಅವರು ಮಾತನಾಡುತ್ತ ಯಾವನೇ ಒಬ್ಬ ವ್ಯಕ್ತಿ ತಾನು ನಿರ್ವಹಿಸುವ ಕೆಲಸ ಕಾರ್ಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾರೇ ಪ್ರಶ್ನಿಸಿದರೂ ಅದಕ್ಕೆ ಸರಿಯಾದ ಉತ್ತರಗಳು ದೊರೆಯುವಂತಿರಬೇಕು , ಅಂತಹ ತಾರ್ಕಿಕ ವಿಚಾರಗಳಿರುವ ವ್ಯಕ್ತಿಯ ನಿರ್ಧಾರಗಳು ಇನ್ನೊಬ್ಬರಿಗೆ ಆದರ್ಶವಾಗಿರುತ್ತದೆ. ಇದಕ್ಕೆ ಸಾಕ್ಷಿ ಇಂದು ನಿವೃತ್ತಿ ಹೊಂದುತ್ತಿರುವ ಮಂಜ ನಾಯ್ಕ ಮತ್ತು ಸಾಯಿರಾಮ್ ಪವಾರ್ ಎಂದರು.DSC_3608

ಕ.ವಿ.ಪ್ರ.ನಿ.ನಿ ನೌಕರರ ಸಂಘ ಕೇಂದ್ರ ಸಮಿತಿ ಬೆಂಗಳೂರಿನ ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್ ಮಾತನಾಡುತ್ತಾ ಕಾರ್ಮಿಕ ಕಲ್ಯಾಣದಿಂದ ಇಲಾಖೆಗಳ ಪ್ರಗತಿಸಾಧ್ಯ. ಆಧುನಿಕ ಜಗತ್ತಿಗೆ ಹೊಂದಿಕೊಂಡಂತೆ ಮೆಸ್ಕಾಂ ಈಗಾಗಲೇ ಅನೇಕ ಆಧುನಿಕ ತಂತ್ರಾಂಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಅದಕ್ಕೆ ಮೆಸ್ಕಾಂ ನ ಕಾರ್ಮಿಕ ಶಕ್ತಿಯೇ ಕಾರಣ . ಮೇಲಾಧಿಕಾರಿಗಳಿಂದ ಹಿಡಿದು ಮೆಸ್ಕಾಂನ ಪವರ್ ಮ್ಯಾನ್ ಗಳ ತನಕವೂ ದಕ್ಷತೆಯಿಂದ ದುಡಿಯುತ್ತಿರುವ ಪ್ರತಿಫಲವೇ ಇಲಾಖೆಯ ಸರ್ವ ಅಭಿವೃದ್ಧಿಗೆ ಕಾರಣವಾಗಿದೆ . ಈಹಂತ ತಲುಪಬೇಕಾದರೆ ದುಡಿಯುತ್ತಿರುವ ಶ್ರಮ ಶಕ್ತಿಗಳಿಗೆ ತಕ್ಕ ಸಂಭಾವನೆ ಹಾಗೂ ಸೌಲಭ್ಯಗಳು ಸಿಕ್ಕಾಗ ಮಾತ್ರ ಸಾಧ್ಯ . ಮೆಸ್ಕಾಂ ನ ಪವರ್ ಮ್ಯಾನ್ , ಲೈನ್ ಮ್ಯಾನ್ ಪ್ರತಿದಿನವೂ ಅಪಾಯದ ಅಂಚಿನಲ್ಲಿದ್ದು ಅವರಿಗೆ ಸೂಕ್ತ ಭಧ್ರತೆಯನ್ನು ಒದಗಿಸುವುದು ಇಲಾಖೆಯ ಕರ್ತವ್ಯ . ಈನಿಟ್ಟಿನಲ್ಲಿ ಮೆಸ್ಕಾಂ ನ ಕಾರ್ಯಕ್ರಮಗಳು ಶ್ಲಾಘನೀಯ. ಒಂದು ಕಾಲದಲ್ಲಿ ಬೆಸ್ಕಾಂ ನಂಬರ್ ಒನ್ ಸ್ಥಾನದಲ್ಲಿದ್ದರೆ ಪ್ರಸ್ತುತ ಮೆಸ್ಕಾಂ ಉತ್ತಮ ಕಾರ್ಯ ನಿರ್ವಹಿಸಿ ಒಂದನೇ ಸ್ಥಾನಕ್ಕೆ ಬಂದಿರುವುದು ಅಭಿನಂದನಾರ್ಹ ಎಂದು ನುಡಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ. ಅಧ್ಯಕ್ಷತೆ ವಹಿಸಿದ್ದರು.KAR_8313

KAR_8310ವೇದಿಕೆಯಲ್ಲಿ ಮಹದೇವಪ್ಪ ನಿವೃತ್ತ ಮುಖ್ಯ ಅಧಿಕಾರಿ ಮಂಗಳೂರು ವಲಯ, ಆರ್.ಎಸ್.ಜಂಬಗಿ, ಆರ್ಥಿಕ ಅಧಿಕಾರಿಗಳು ಕಾರ್ಪೋರೇಟ್ ಕಚೇರಿ ಮಂಗಳೂರು ,ಕೆ.ವಿ.ಉಮೇಶ್ಚಂದ್ರ ಅಧೀಕ್ಷಕ ಇಂಜಿನಿಯರ್ ಮಂಗಳೂರು, ಮುರಳೀಧರ ನಾಯಕ್ ಉಪಲೆಕ್ಕ ನಿಯಂತ್ರಣಾಧಿಕಾರಿ ಕ.ವಿ.ಪ್ರ.ನಿ.ನಿ ಮರೊಳಿ, ಎಚ್.ಎಸ್.ಗುರುಮೂರ್ತಿ ಉಪಾಧ್ಯಕ್ಷರು ಕ.ವಿ.ಪ್ರ.ನಿ.ನಿ ನೌಕರರ ಸಂಘ ಮಂಗಳೂರು , ಶ್ರೀನಿವಾಸಪ್ಪ ಕೇಂದ್ರ ಸಮಿತಿ ಸದಸ್ಯರು ಪ.ಜಾ.ಹಾಗೂ ಪ.ವರ್ಗಗಳ ಕಲ್ಯಾಣ ಸಂಸ್ಥೆ ಮೆಸ್ಕಾಂ ಮಂಗಳೂರು, ರಾಮಚಂದ್ರ ಎ. ಶಾಖಾಧಿಕಾರಿ ಮೆಸ್ಕಾಂ ಪುತ್ತೂರು, ಕೆ.ಶಂಕರ್ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ಕ.ವಿ.ಪ್ರ.ನಿ.ನಿ ನೌಕರರ ಸಂಘ ಮಂಗಳೂರು, ಮಾರಪ್ಪ ಅಧ್ಯಕ್ಷರು, ಪ.ಜಾ.ಹಾಗೂ ಪ.ವರ್ಗಗಳ ಕಲ್ಯಾಣ ಸಂಸ್ಥೆ ಮೆಸ್ಕಾಂ ಮಂಗಳೂರು ಉಪಸ್ಥಿತರಿದ್ದರು. ಮೆಲ್ವಿನ್ ಪ್ರಕಾಶ್ ಪಿರೇರಾ ಪ್ರಸ್ತಾನವೆಗೈದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್ ಸ್ವಾಗತಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ವಂದಿಸಿ, ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *