ಬಂಟ್ವಾಳ: ಬೆಂಗಳೂರು ಸಮರ್ಪಣ್ ಟ್ರಸ್ಟ್‌ ಇನ್ಪೋಸಿಸ್ ಇವರ ವತಿಯಿಂದ ಬಂಟ್ವಾಳ ತಾಲೂಕಿನ  ಸರಕಾರಿ ಶಾಲೆ ಗಳಿಗೆ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮ ದ ಅಧ್ಯಕ್ಷತೆಯ ನ್ನು ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ವಿಜ್ಞಾನ ದ ಬೋಧನೆ ಪರಿಣಾಮಕಾರಿಯಾಗಿ ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ಅರಿತುಕೊಂಡು ಉತ್ತಮ ವಾದ ಕಾರ್ಯ ಕ್ರಮವನ್ನು ಇನ್ಫೋಸಿಸ್ ಸಮರ್ಪಣ್ ಟ್ರಸ್ಟ್ ಮಾಡಿದೆ.
IMG_0579
IMG_0614
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ರಮಾನಂದ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ  ಜೋಯೆಲ್ ಲೋಬೊ, ಇನ್ಫೋಸಿಸ್ ಟ್ರಸ್ಟ್ ನ ಪ್ರಮುಖರಾದ ಶೇಖರ್ , ಕೋಮಲ, ಶ್ವೇತಾ, ಡಿ.ಸಿ.ಸಿ.ಬ್ಯಾಂಕ್ ಸಿಬ್ಬಂದಿ ಪದ್ಮನಾಭ ಶೆಟ್ಟಿ, ಪಂಜಿಕಲ್ಲು ಶಾಲಾ ಶಿಕ್ಷಕ ಇಂಮ್ತಿಯಾಜ್ ಬೆಂಗಳೂರು ಇನ್ಪೊಸಿಸ್ ಸಮರ್ಪಣ್ ಟ್ರಸ್ಟ್ ನ ಕೋರ್ ಟೀಂ ಸದಸ್ಯ ರಿತೇಶ್ ಪ್ರಸ್ತಾವನೆ ನೀಡಿ  ಈಗಾಗಲೇ 22 ಜಿಲ್ಲೆಗಳಲ್ಲಿ ಪರಿಕರಗಳ ನ್ನು ವಿತರಣೆ ಮಾಡಲಾಗಿದೆ.ಫಲಾನುಭವಿಗಳ ಸ್ಪಂದನೆ ಯನ್ನು  ತಿಳಿದುಕೊಂಡು ಮುಂದಿನ ದಿನಗಳಲ್ಲಿ ಬೇರೆ ಬೇರೆ ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಮಾಡಲು ಅವಕಾಶ ಮಾಡಿ ಕೊಡಿ ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿ ಸ್ವಾಗತಿಸಿದರು. ಸಿ.ಇ.ಒ ಸುಶೀಲಾ ವಂದಿಸಿದರು.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ‌

By suddi9

Leave a Reply

Your email address will not be published. Required fields are marked *