ಬಂಟ್ವಾಳ :ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ವಿವಿಧ ಯೋಜನೆಯಡಿ 67.50ಲಕ್ಷ ರೂ. ಅನುದಾನದಲ್ಲಿ ಮಣಿನಾಲ್ಕೂರುವಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಜರಗಿತು. ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು.ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪ್ರ.ಅರ್ಚಕ ಗೋಪಾಲಕೃಷ್ಣ ಐತಾಳ್ ಅವರು ಪೂಜಾ ವಿಧಿ ವಿಧಾನ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಗ್ರಾ.ಪಂ. ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾ.ಪಂ.ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಡೆನಿಸ್ ಮೊರಾಸ್, ಶಿವಪ್ಪ ಪೂಜಾರಿ ಹಟದಡ್ಕ, ಆದಂ ಕುಂಞ, ಜಿ.ಎಂ.ಫಾರೂಕ್, ಧರಣೇಂದ್ರ ಜೈನ್, ಗೀತಾ ಅರಿಪಾಡಿ, ಜಯಲಕ್ಷ್ಮಿ, ಯಶೋಧಾ, ಪದ್ಮಾವತಿ, ಸುಜಾತಾ, ವಸಂತಿ, ಪಂ.ಅ.ಅಧಿಕಾರಿ ವಸಂತಿ, ಸರಪಾಡಿ ಗ್ರಾ.ಪಂ. ಸದಸ್ಯರಾದ ದಯಾನಂದ ಶೆಟ್ಟಿ ಅಮೈ, ಧನಂಜಯ ಶೆಟ್ಟಿ ಸರಪಾಡಿ, ಪ್ರಮುಖರಾದ ಬೇಬಿ ಕುಂದರ್, ಪುರುಷೋತ್ತಮ ಮಜಲು, ಸಾಂತಪ್ಪ ಪೂಜಾರಿಹಟದಡ್ಕ, ಪೂವಪ್ಪ ಪೂಜಾರಿಅಗಚರಕೋಡಿ, ಶಿವರಾಮ ಶೆಟ್ಟಿ ದೋಟ, ತಿಲಕ್ ಬಂಗೇರ, ಸಾದಿಕ್, ರಿಜ್ವಾನ್, ರವೀಂದ್ರ ಟಿ.ಸಿ., ಶೇಖರ ಪೂಜಾರಿ, ಉದ್ಯೋಗ ಖಾತ್ರಿ ಯೋಜನೆ ಅಭಿಯಂತರ ರಾಬರ್ಟ್, ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಕೃಷ್ಣ ಮಾನೆ, ಗ್ರಾ.ಪಂ. ಕಚೇರಿ ಸಿಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯರಾದ ಡೆನಿಸ್ ಮೊರಾಸ್, ಶಿವಪ್ಪ ಪೂಜಾರಿ ಹಟದಡ್ಕ, ಆದಂ ಕುಂಞ, ಜಿ.ಎಂ.ಫಾರೂಕ್ ಅವರು 21.50 ಸೆಂಟ್ಸ್ ಜಾಗವನ್ನು ಖರೀದಿಸಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ದಾನವಾಗಿ ನೀಡಿದ್ದಾರೆ.
