ಬಂಟ್ವಾಳ: ಕಳೆದ 34 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 35ನೇ ಸಂಭ್ರಮಾಚರಣೆಯ ಪ್ರಯುಕ್ತ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಫೆ.10ರಂದು ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಲಿದೆ ಎಂದು ಕ್ಲಬ್‍ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಬೆಳಗ್ಗೆ 9.30ಕ್ಕೆ ಬಸವನಗುಡಿ ಬಸವೇಶ್ವರ ದೇವಾಲಯದಿಂದ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾತಂಡಗಳೊಂದಿಗೆ ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ವಕವಾಗಿ ಸಾಗಿ ಬರಲಿದೆ. ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.18ರ ಶುಭ ಮುಹೂರ್ತದಲ್ಲಿ 11 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ,ಬದಿಯಡ್ಕ ಉದ್ಯಮಿ ವಸಂತ ಶೆಣೈ ಮಂಗಳ ಸೂತ್ರ ವಿತರಿಸಲಿರುವರು.
ವಿವಿಧ ಕ್ಷೇತ್ರಗಳ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಮಧ್ಯಾಹ್ನ ಸಾರ್ವಜನಿಕರಿಗೆ ವಿವಾಹ ಭೋಜನ ಏರ್ಪಡಿಸಲಾಗಿದೆ. ಬಳಿಕ ಕ್ಲಬ್ ವತಿಯಿಂದ ದ್ವಿತೀಯ ವರ್ಷದ ಶಿಶಿರ್ ಕುಮಾರ್ ಸ್ಮೃತಿ ಕಾರ್ಯಕ್ರಮ, ಹಾಲಾಡಿ ಮತ್ತು ಪೆರ್ಡೂರು ಮೇಳದ ಆಯ್ದ ಕಲಾವಿದರಿಂದ ಮಧುರಾ-ಮಹೇಂದ್ರ ಯಕ್ಷಗಾನ, ವೈಷ್ಣವಿ ಕಲಾವಿದೆರ್ ಕೊಯಿಲ ಇವರಿಂದ ಕುಸಾಲ್ದ ಗೌಜಿ ಹಾಸ್ಯ ಪ್ರದರ್ಶನವಿದೆ ಎಂದು ಅವರು ತಿಳಿಸಿದ್ದಾರೆ.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಶ್ರೀನಿವಾಸ ಪಿ.ಕಲ್ಯಾ ಮುಂಬಯಿ(ಉದ್ಯಮ), ಸುಂದರ ಹೆಗ್ಡೆ-(ಚಲನಚಿತ್ರ)ಅಶೋಕ್ ಚೂಂತಾರು (ಕೃಷಿ), ಲ|ಸದಾಶಿವ ಆಚಾರ್ಯ(ಸಮಾಜಸೇವೆ), ಕಲಾಕುಂಭ ಸಾಂಸ್ಕøತಿಕ ವೇದಿಕೆ,ಕುಳಾಯಿ(ಸಂಘಟನೆ)
ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ : ರವಿ ರೈ ಕಳಸ(ಚಲನಚಿತ್ರ), ಹೊನ್ನಪ್ಪ ಪೂಜಾರಿ (ಸಂಘಟನೆ), ಡಾ|ರಾಮಕೃಷ್ಣ ಎಸ್.(ಸಮಾಜ ಸೇವೆ), ಎಸ್.ಪಿ.ಸರಪಾಡಿ(ಕಲೆ), ಕು| ಅನ್ವಿಷಾ ವಾಮಂಜೂರು(ಸಾಂಸ್ಕøತಿಕ), ಕು. ಕಾವ್ಯಶ್ರೀ ಜೋಡುಕಲ್ಲು(ಯೋಗ)
