ಬಂಟ್ವಾಳ: ತಾಲೂಕಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಫೆಬ್ರವರಿ ೨೦೧೯ ರ ಸರ್ವಜ್ಞ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ೪ ಚಕ್ರ ವಾಹನ ಜಾಥಾ ಹಾಗೂ ‘ಸರ್ವಜ್ಞ ಟ್ರೋಫಿ-೨೦೧೯’ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಕುಲಾಲ-ಮಠ ಕುಂಬೋಧರಿ ದೇವಸ್ಥಾನದಲ್ಲಿ ಯುವವೇದಿಕೆಯ ಗೌರವ ಸಲಹೆಗಾರ ಸೇಷಪ್ಪ ಮೂಲ್ಯ ಬಿಡುಗಡೆಗೊಳಿಸಿದರು.         1YA yuvavedike
ಬಂಟ್ವಾಳ ಕುಲಾಲ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಕುಂಬೋಧರಿ ಜೀರ್ಣೋದ್ಧಾರ ಸಮಿತಿ ಸದಸ್ಯ ಸೇಸಪ್ಪ ಕೈಕುಂಜ, ಯುವವೇದಿಕೆಯ ಗೌರವ ಸಲಹೆಗಾರ ಸೋಮನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ಯಾದವ ಕುಲಾಲ್ ಉಪಸ್ಥಿತರಿದ್ದರು.
ಫೆ.೧೦ರಂದು ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಕುಲಾಲ ಸಮಾಜ ಬಾಂಧವರ ನಾಲ್ಕು ಚಕ್ರಗಳ ವಾಹನ ಜಾಥಾವನ್ನು ಮಂಗಳೂರು ಬರ್ಕೆಯ ಯಜ್ಞೇಶ್ ಕುಲಾಲ್ ಉದ್ಘಾಟಿಸಲಿದ್ದಾರೆ. ನಂತರ ಬಂಟ್ವಾಳ ಎಸ್‌ವಿಎಸ್ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುವ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಐಪಾಸ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಗೋಪಾಲ ಗೋವಿಂದೋಟ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬಂಟ್ವಾಳ ಯುವವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ವಹಿಸಲಿದ್ದು,ಸಮಾಜದ ಹಲವಾರು ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
 ಈ ಸಂದರ್ಭ  ಶೌರ್ಯ ಮೆರೆದ ಯುವ ರಾಜೇಶ್ ನರಿಕೊಂಬುರವರಿಗೆ ಸನ್ಮಾನ ಕಾರ್ಯಕ್ರಮ, ಸದಸ್ಯರ ಗುರುತಿನ ಚೀಟಿ ವಿತರಣೆ, ತಾಲೂಕು ಮಟ್ಟದ ಜನಗಣತಿಯ ನೋಂದಣಿ ಅರ್ಜಿ ಬಿಡುಗಡೆ ಹಾಗೂ ಕೆದಿಲ ಗ್ರಾಮದ ಕಾಂಜಲಿಕೆಯ ವಿದ್ಯಾರ್ಥಿ ಮಿತೇಶ್ ಅವರಿಗೆ ವೈದ್ಯಕೀಯ ನೆರವು  ನೀಡುವ ಕಾರ್ಯಕ್ರಮ ನಡೆಯಲಿದೆ.
ಕ್ರಿಕೆಟ್ ಪಂದ್ಯಾಟ :  ಬಳಿಕ ಬಂಟ್ವಾಳ ತಾಲೂಕಿನ ಸ್ವಜಾತಿ ಬಾಂದವರಿಗಾಗಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ಪ್ರಥಮ ೭೭೭೭, ದ್ವಿತೀಯ ೫೫೫೫, ತೃತೀಯ ೩೩೩೩, ಚತುರ್ಥ ೧೧೧೧ ಹಾಗೂ ಸರ್ವಜ್ಞ ಟ್ರೋಫಿಯೊಂದಿಗೆ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ,
ಉತ್ತಮ ಎಸೆತಗಾರ, ಶಿಸ್ತಿನ ತಂಡ ಪ್ರಶಸ್ತಿ ನೀಡಲಾಗುವುದು. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Attachments area

 

By suddi9

Leave a Reply

Your email address will not be published. Required fields are marked *