ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲೂಕಿನ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್ .ಎಚ್.ಮಂಜುನಾಥ್ ಉದ್ಘಾಟಿಸಿ ಮಾತನಾಡಿ ಧರ್ಮಸ್ಥದ ಮಹಾಮಸ್ತಾಕಭಿಷೇಕದ ನೆನಪಿಗಾಗಿ ಜ.1ರ ಮಾ.31ರವರೆಗೆ ಆಟೋ, ಟ್ಯಾಕ್ಸಿ, ಗೂಡ್ಸ್ ಟೆಂಪೊ ಖರೀದಿಸುವವರಿಗೆ 10 ಸಾವಿರ ರೂ ಸಹಾಯಧನವನ್ನು ನೀಡಲಾಗುತ್ತದೆ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಘೋಷಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇವತ್ತು ಕೂಡಾ 30 ಸಾವಿರ ಕುಟುಂಬ ದ 155 ಕೋಟಿ ರೂ ಮೊತ್ತ ಚಾಲ್ತಿ ಖಾತೆಯಲ್ಲಿದೆ.
ಸ್ವಸಹಾಯ ಸಂಘದ ಎಲ್ಲಾ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಘೋಷಣೆಯನ್ನು ಕೂಡಾ ಡಾ.ಹೆಗ್ಗಡೆ ಅವರು ಮಾಡಿದ್ದು, ರಾಜ್ಯದಲ್ಲಿ ನಿರುಪಯುಕ್ತಕೆರೆಗಳ ದುರಸ್ತಿ ಕಾರ್ಯ ನಡೆಯಲಿದೆ ಎಂದರು.
ದೇವರು, ಗುರು, ಹಿರಿಯರಿಗೆ ಗೌರವ ನೀಡುವ ಮತ್ತು ಮಕ್ಕಳಿಗೆ ಸಂಸ್ಕ್ರತಿಯನ್ನು ಮೂಡಿಸುವ ಕೆಲಸ ತಾಯಂದಿರು ಮಾಡಬೇಕು.ಮದ್ಯಪಾನ ಮತ್ತು ಡ್ರಗ್ಸ್ ಮಾಫಿಯಾ ಸಮಾಜವನ್ನು ಕೆಡಿಸುತ್ತಿದೆ, ಮಕ್ಕಳು ದುಶ್ಚಟಗಳಿಗೆ ಬೀಳದಂತೆ ತಾಯಂದಿರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಸದಾನಂದ ನಾವೂರ ವಹಿಸಿದ್ದರು.
ಶಾಸಕ ಯು.ರಾಜೇಶ್ ನಾಯ್ಕ್ ,ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ತಾಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೇಂದ್ರ ಒಕ್ಕೂಟದ ಸಮಿತಿಯ ನೂತನ ಅದ್ಯಕ್ಷ ಮಾದವ ವಳವೂರು, ಎಪಿಎಂಸಿ ಮಾಜಿ ಅಧ್ಯಕ್ಷ ರೋನಾಲ್ಡ್ ಡಿಸೋಜ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜಯಾನಂದ ಪಿ ವರದಿವಾಚಿಸಿದರು. ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಸ್ವಾಗತಿಸಿ, ಮೇಲ್ವಿಚಾರಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ವಿವಿಧ ವೇತನಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.
