ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 3ರಿಂದ 7ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರುಗಲಿದೆ. ಒಟ್ಟು 2.5 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕೃತ, ಶಿಲಾಮಯ ದೈವಸ್ಥಾನ ಇದಾಗಿದೆ. ಇದಕ್ಕೆ ಶತಮಾನದ ಇತಿಹಾಸವಿದೆ.IMG_20190131_102016

ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಆಶೀರ್ವಚನ, ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳು, ಗುರುಪುರ ಅಣ್ಣು ಭಟ್ಟರ ನೇತೃತ್ವದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಗುರುಪುರ ಜಂಗಮ ಮಠದ ಶ್ರೀ ರುದ್ರಮುನಿ ಸ್ವಾಮಿ ಉಪಸ್ಥಿತಲಿರುವರು.IMG_20190131_101831

ಫೆಬ್ರವರಿ 3ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ : ಬೆಳಿಗ್ಗೆ 7:30ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಜರುಗಲಿದೆ. ಅಪರಾಹ್ನ 2 ಗಂಟೆಗೆ ಊರ ಹಾಗೂ ಪರವೂರ ದಾನಿಗಳ ಸೇವಾ ರೂಪದ ಹೊರೆಕಾಣಿಕೆ ಶೋಭಾಯತ್ರೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಗುವುದು. ಸಂಜೆ 5:30ಕ್ಕೆ ವಾಮಂಜೂರು ಶ್ರೀರಾಮ ಭಜನಾ ಮಂದಿರದಿಂದ ಶ್ರೀ ದೈವಗಳ ಮಂಚ ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ತರಲಾಗುವುದು. ಸಂಜೆ 6ಕ್ಕೆ ಶಿಲ್ಪಿಗಳಿಂದ ಗೇಹ ಪ್ರತಿಗ್ರಹ.

ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 5ಕ್ಕೆ ಸಭಾ ಕಾರ್ಯಕ್ರಮ. ತಂತ್ರಿಗಳು, ಸ್ವಾಮೀಜಿಗಳು, ಗುತ್ತಿನವರು, ಸೇವಾ ಮನೆತನದವರು ಹಾಗೂ ವ್ಯವಸ್ಥಾಪನಾ ಸಮಿತಿಯವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಉದ್ಘಾಟನೆ. ಸಂಜೆ 6-9ರವರೆಗೆ ಪ್ರಶಾಂತ್ ಗುರುಪುರ ಸಾರಥ್ಯದ ಗುರುದಯಾ ತಂಡದ ರಂಗ್‍ದ ಕಲಾವಿದೆರ್ ಇವರಿಂದ `ನಂಬೆರಲತ್ತ್ ಬುಡಿಯೆರೆಲತ್ತ್’ ತುಳು ಹಾಸ್ಯಮಯ ನಾಟಕ ಜರುಗಲಿದೆ.

 

ಫೆಬ್ರವರಿ 4ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ : ಸಂಜೆ 6ಕ್ಕೆ ಪಂಚಗವ್ಯ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ ಮತ್ತು ದಿಕ್ಪಾಲಕ ಬಲಿ.

ಸಾಂಸ್ಕೃತಿಕ ಕಾರ್ಯಕ್ರಮ : ಅಪರಾಹ್ನ 3-5ರವರೆಗೆ ಗುರುಪುರ ಶ್ರೀ ವರದರಾಜ ವೆಂಕಟರಮಣ ಭಜನಾ ಮಂಡಳಿಯವರಿಂದ ಭಜನಾ `ಭಕ್ತಿ ಸಿಂಚನ’. ಸಂಜೆ 7ಕ್ಕೆ ಸಭಾ ಕಾರ್ಯಕ್ರಮ. ಗುತ್ತಿನವರು, ಸೇವಾ ಮನೆತನದವರು ಹಾಗೂ ವ್ಯವಸ್ಥಾಪನಾ ಸಮಿತಿಯವರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಸಮಯದಲ್ಲಿ ಶ್ರಮದಾನಗೈದ ಕರಸೇವಕರ ಗುರುತಿಸಿ ಸನ್ಮಾನಿಸಲಾಗುವುದು. ದೋಣಿಂಜೆಗುತ್ತು ಸುರೇಂದ್ರ ಮಲ್ಲಿ ಪ್ರಾಯೋಜಕತ್ವದಲ್ಲಿ ಸಂಜೆ 7-10ರವರೆಗೆ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ, ಕಳವಾರು ಬಾಳ ಇವರಿಂದ `ಶಿವಲೀಲಾಮೃತ’ ಪೌರಾಣಿಕ ಯಕ್ಷಗಾನ ಪ್ರದರ್ಶನವಿದೆ.

 

ಫೆಬ್ರವರಿ 5ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ : ಬೆಳಿಗ್ಗೆ 8:30ಕ್ಕೆ ನವಗ್ರಹ ಶಾಂತಿ, ಮೃತ್ಯಂಜಯ ಹೋಮ, ಪ್ರಾಯಶ್ಚಿತ್ತ ಹೋಮ, ಸಂಜೆ 6ಕ್ಕೆ ಭಂಡಾರ ಮನೆಯಲ್ಲಿ ಶುದ್ಧಿ ಕಲಶ, ನಾಗಬನದಲ್ಲಿ ಆಶ್ಲೇಷ ಬಲಿ.

ಸಾಂಸ್ಕೃತಿಕ ಕಾರ್ಯಕ್ರಮ : ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ. ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ದೈವಸ್ಥಾನದ ಮೂರೂರು ಖಂಡಿಗೆ ಆನುವಂಶಿಕ ಅರ್ಚಕ ರಾಮದಾಸ ಆಸ್ರಣ್ಣ, ಗುರುಪುರ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿರದ ಚಂದ್ರಕಾಂತ ಭಟ್ಟರಿಂದ ಆಶೀರ್ವಚನ. ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಅಧ್ಯಕ್ಷತೆ. ಮುಖ್ಯ ಅತಿಥಿಗಳಾಗಿ ಶ್ರೇಣಿಕ್‍ರಾಜ್ ಜೈನ್(ಉಳಿಯಾರಬೆಟ್ಟು, ನೆಲ್ಲಿಕಾರು), ಸದಾನಂದ ಸಪಲಿಗ(ಎಇಒ ತಾಪಂ ಮಂಗಳೂರು), ಸೇಸಪ್ಪ ಕೋಟ್ಯಾನ್(ಅಧ್ಯಕ್ಷರು, ಬಿಲ್ಲವ ಸೇವಾ ಸಮಾಜ ಬಂಟ್ವಾಳ, ಮಾಲಕರು-ಶುಭ ಬೀಡಿಗಳು ಪಚ್ಚಿನಡ್ಕ), ಡಾ. ದುರ್ಗಾಪ್ರಸಾದ್ ಎಂ ಆರ್(ಆರ್‍ಎಂಒ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು) ಮತ್ತು ಪಾಂಡುರಂಗ ಕಾಮತ್(ಅಧ್ಯಕ್ಷರು, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ, ಗುರುಪುರ). ಸಂಜೆ 6ರಿಂದ 9:30ರವರೆಗೆ ವಿಶ್ವಾಸ್ ಮೆಲೋಡೀಸ್ ಗುರುಪುರ ಇವರಿಂದ `ಗಾನ ಸುಧೆ’ ಭಕ್ತಿಗೀತೆ-ಭಾವಗೀತೆ-ರಸಮಂಜರಿ.

 

ಫೆಬ್ರವರಿ 6ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ : ಬೆಳಿಗ್ಗೆ 8:30ಕ್ಕೆ ಶಾಂತಿ ಹೋಮಗಳು, ಶ್ರೀ ದೈವಗಳ ಭಂಡಾರ ಆಗಮನ, ಬಿಂಬಿ ಶುದ್ಧಿ ಪ್ರಕ್ರಿಯೆ, ನೂತನ ಪೀಠ, ಧ್ವಜಸ್ತಂಭ ಇತ್ಯಾದಿಗಳ ಶುದ್ಧಿ ಪ್ರಕ್ರಿಯೆ. ಸಂಜೆ 6:30ರಿಂದ ಬಿಂಬಧಿವಾಹ, ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕಲಶಾಧಿವಾಸ, ಧ್ವಜಾಧಿವಾಸ, ಅಧಿವಾಸ ಹೋಮಗಳು ಮತ್ತು ಪ್ರತಿಷ್ಠಾ ಹೋಮ.

ಸಾಂಸ್ಕೃತಿಕ ಕಾರ್ಯಕ್ರಮ :- ಮಧ್ಯಾಹ್ನ 2ರಿಂದ 5:30ರವರೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ `ಕೃಷ್ಣಸ್ತು ಭಗವಾನ್ ಸ್ವಯಂ’ ಯಕ್ಷಗಾನ ತಾಳಮದ್ದಳೆ.

ಭಾಗವತರು ಪಟ್ಲ ಸತೀಶ್ ಶೆಟ್ಟಿ. ಬಲಿಪ ಪ್ರಸಾದ ಭಾಗವತ. ಚೆಂಡೆ ಚಂದ್ರಶೇಖರ್ ಭಟ್ ಕೊಂಕಣಾಜೆ. ಅರ್ಥಧಾರಿಗಳು : ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸೀತಾರಾಮ ಕುಮಾರ್ ಕಟೀಲು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ. ಸಂಯೋಜನೆ ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು.

ಸಂಜೆ 5:30ರಿಂದ ಸಭಾ ಕಾರ್ಯಕ್ರಮ : ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರಿಂದ ಆಶೀರ್ವಚನ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ(ಕತಾರ್) ದೋಣಿಂಜೆಗುತ್ತು ಅಧ್ಯಕ್ಷತೆ. ಜನಾಬ್ ಶಂಶುದ್ದೀನ್ ಅಶ್ರಫಿ(ಧರ್ಮಗುರು, ಗುರುಪುರ ಬೈಲುಪೇಟೆ ದರ್ಗಾ), ರೆ. ಫಾ. ಅಂತೋನಿ ಲೋಬೊ(ಧರ್ಮಗುರು, ಪೊಂಪೈ ಚರ್ಚ್ ಕೈಕಂಬ) ಹಾಗೂ ಡಾ. ರೀಟಾ ನೊರೊನ್ಹಾ(ವಿಶ್ರಾಂತ ಪ್ರೊಫೆಸರ್, ಸಾಮಾಜಿಕ ಕಾರ್ಯಕರ್ತೆ, ವಾಮಂಜೂರು) ಇವರಿಂದ ಧಾರ್ಮಿಕ ಭಾಷಣ. ಮುಖ್ಯ ಅತಿಥಿಗಳಾಗಿ ಟಿ. ಜಯರಾಮ ಚೌಟ, ದೋಣಿಂಜೆಗುತ್ತು(ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ), ಟಿ. ನಾಗರಾಜ ಶೆಟ್ಟಿ(ಮಾಜಿ ಸಚಿವ), ಕೃಷ್ಣ ಪಾಲೆಮಾರ್(ಮಾಜಿ ಸಚಿವ), ಅಭಯಚಂದ್ರ ಜೈನ್(ಮಾಜಿ ಸಚಿವ), ಅಮರನಾಥ ಶೆಟ್ಟಿ(ಮಾಜಿ ಸಚಿವ), ಮೊೈದಿನ್ ಬಾವ(ಮಾಜಿ ಶಾಸಕ), ಕೆ ರವೀಂದ್ರ ಆಳ್ವ(ಸಿವಿಕ್ ಇಂಡಿಯಾ ಲಿಮಿಟೆಡ್, ಮಂಗಳೂರು), ಹರಿಕೃಷ್ಣ ಬಂಟ್ವಾಳ(ಬಿಜೆಪಿ ದಕ ಜಿಲ್ಲಾ ವಕ್ತಾರ), ಶ್ರೀಮತಿ ರುಕಿಯಾ(ಅಧ್ಯಕ್ಷೆ, ಗುರುಪುರ ಗ್ರಾಮ ಪಂಚಾಯತ್), ಯು ಪಿ ಇಬ್ರಾಹಿಂ(ಜಿಪಂ ಸದಸ್ಯ). ಸಚಿನ್ ಅಡಪ(ತಾಪಂ ಸದಸ್ಯ) ಮತ್ತು ಶಶಿಕುಮಾರ್ ಪಂಡಿತ್(ಸ್ಕಂದ ಜ್ಯೋತಿಷ್ಯಾಲಯ ಮಂಗಳೂರು). ರಾತ್ರಿ 7:30ರಿಂದ ರಾಜ್ಯ ಪ್ರಶಸ್ತಿ ಪುರಸ್ಕøತೆ ಕುಮಾರಿ ಕಸ್ತೂರಿ(ಅಂಧ ಕಲಾವಿದೆ) ಶಿಕ್ಷಕಿ ಎಸ್‍ಡಿಎಂ ಮಂಗಳಜ್ಯೋತಿ ಶಾಲೆ ಮತ್ತು ಬಳಗದವರಿಂದ ಸಂಗೀತ ಗಾಯನ. ಸುಮನಾ ಪಿ ಮಲ್ಲಿ ಹಾಗೂ ಎಂ ಪುರುಷೋತ್ತಮ ಮಲ್ಲಿ ದೋಣಿಂಜೆಗುತ್ತು ಪ್ರಾಯೋಜಕತ್ವ. ರಾತ್ರಿ 9ರಿಂದ ಹವ್ಯಾಸಿ ಯಕ್ಷ ಕಲಾವಿದರು ಗುರುಪುರ ಇವರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಸಂಯೋಜನೆ ಬಾಬು ಸಾಲ್ಯಾನ್ ತಿರುವೈಲು ವಾಮಂಜೂರು.

 

ಫೆಬ್ರವರಿ 7ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ : ಬೆಳಿಗ್ಗೆ 8:15ಕ್ಕೆ ಶ್ರೀ ವೈದ್ಯನಾಥ ಧೂಮಾವತಿ ಬಂಟ ಸಪರಿವಾರ ಸಾನಿಧ್ಯಗಳ ಪುನಾ ಪ್ರತಿಷ್ಠೆ. 9:23ಕ್ಕೆ ಶ್ರೀ ದೈವಗಳಿಗೆ ಬ್ರಹ್ಮಕಲಶಾಭಿಷೇಕ, ಧ್ವಜ ಪ್ರತಿಷ್ಠೆ. ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ. ಬೆಳಿಗ್ಗೆ 10:30ಕ್ಕೆ ಶ್ರೀ ದೈವಗಳ ದರ್ಶನ ಸೇವೆ, ದೋಣಿಂಜೆಗುತ್ತು ಗಡಿಕಾರರಿಗೆ ಮುದ್ರಾ ಧಾರಣೆ, ಪಲ್ಲಪೂಜೆ. ಮಧ್ಯಾಹ್ನ 1ರಿಂದ ಮಹಾ ಅನ್ನಸಂತರ್ಪಣೆ. ರಾತ್ರಿ 10ರಿಂದ ದೈವಗಳ ನೇಮ ಸೇವೆ.

ಸಾಂಸ್ಕೃತಿಕ ಕಾರ್ಯಕ್ರಮ :- ಮಧ್ಯಾಹ್ನ ಒಂದರಿಂದ `ಕಾಂಚಿ ಕಾಮಕೋಟಿ’ ಕಲಾಪ್ರಶಸ್ತಿ ವಿಜೇತ ಗುರುಪುರ ವಿಜಯ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ. ಮಧ್ಯಾಹ್ನ 2ರಿಂದ 4:30ರವರೆಗೆ ವಿಠಲ ನಾಯಕ್ ಕಲ್ಲಡ್ಕ ಇವರಿಂದ `ಗೀತಾ-ಸಾಹಿತ್ಯ-ಸಂಭ್ರಮ’. ಕಾರಮೊಗರುಗುತ್ತು ಕುಟುಂಬಿಕರು ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.

ಸಂಜೆ 4:30ರಿಂದ ಸಭಾ ಕಾರ್ಯಕ್ರಮ. ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳಿಂದ ಆಶೀರ್ವಚನ. ಜಸ್ಟಿಸ್ ಜಯರಾಮ ಚೌಟ ದೋಣಿಂಜೆಗುತ್ತು(ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ) ಅಧ್ಯಕ್ಷತೆ. ಜಸ್ಟಿಸ್ ಸಂತೋಷ್ ಹೆಗ್ಡೆ(ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ, ಕರ್ನಾಟಕ) ದಿಕ್ಸೂಚಿ ಭಾಷಣ. ಡಾ. ಹರೀಶ ಶೆಟ್ಟಿ(ಮುಂಬೈ, ಪ್ರಖ್ಯಾತ ಮನೋವೈದ್ಯರು, ಸಾಮಾಜಿಕ ಕಾರ್ಯಕರ್ತರು) ಶುಭಾಶಂಸನೆ. ಡಾ. ಶಶಿಕಲಾ ಗುರುಪುರ ಗೋಳಿದಡಿಗುತ್ತು(ಡೀನ್ & ಡೈರೆಕ್ಟರ್, ಸಿಂಬಯೋಸಿಸ್, ಪುಣೆ) ಮತ್ತು ಡಾ. ರವಿ ಶೆಟ್ಟಿ(ಕತಾರ್) ದೋಣಿಂಜೆಗುತ್ತು(ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ) ಇವರಿಂದ ಆಶಯ ಭಾಷಣ. ಮುಖ್ಯ ಅತಿಥಿಗಳಾಗಿ ಯು. ಟಿ ಖಾದರ್(ಜಿಲ್ಲಾ ಉಸ್ತುವಾರಿ ಸಚಿವ), ನಳಿನ್ ಕುಮಾರ್ ಕಟೀಲ್(ಸಂಸದ), ಡಾ. ಭರತ್ ವೈ ಶೆಟ್ಟಿ(ಶಾಸಕ), ಬಿ ರಮಾನಾಥ ರೈ(ಮಾಜಿ ಸಚಿವ), ಐವನ್ ಡಿ’ಸೋಜ(ಎಂಎಲ್‍ಸಿ, ಸಂಸದೀಯ ಕಾರ್ಯದರ್ಶಿ, ಕರ್ನಾಟಕ), ವಿನಯ ಕುಮಾರ್ ಸೊರಕೆ(ಮಾಜಿ ಸಚಿವ). ಡಾ. ಎಂ ಎನ್ ರಾಜೇಂದ್ರ ಕುಮಾರ್(ಅಧ್ಯಕ್ಷರು, ಎಸ್‍ಸಿಡಿಸಿಸಿ ಬ್ಯಾಂಕ್) ಮತ್ತು ಪದ್ಮನಾಭ ಕೋಟ್ಯಾನ್(ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ).

ರಾತ್ರಿ 7:30ರಿಂದ ಎಳೆಯ ಪ್ರತಿಭೆ ಸಾಕ್ಷ್ಯಿ ಗುರಪುರ ಮತ್ತು ತಂಡದವರಿಂದ ನೃತ್ಯ ವೈವಿಧ್ಯ. ರಾತ್ರಿ 8ರಿಂದ ಕುಡ್ಲ ಕ್ರಿಯೇಶನ್ಸ್ ಮಂಗಳೂರು ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ. ಪ್ರಾಯೋಜಕತ್ವ ಪ್ರಶಾಂತ ಮುಂಡ, ಮರಂಕರಿಯ. ರಾತ್ರಿ 8:30ರಿಂದ ಗುರುಪುರ ಬಂಟರ ಮಾತೃ ಸಂಘ ಪ್ರಾಯೋಜಕತ್ವದಲ್ಲಿ ಸಂಘದ ಸದಸ್ಯರಿಂದ `ತುಳುವ ನಡಕೆ’ ನೃತ್ಯ ರೂಪಕ. ಪರಿಕಲ್ಪನೆ ಪರಮಾನಂದ ಸಾಲ್ಯಾನ್ ಸಸಿಹಿತ್ಲು.

By suddi9

Leave a Reply

Your email address will not be published. Required fields are marked *