ಉಡುಪಿ: ಉಡುಪಿ ಕೆಳಾರ್ಕಳಬೆಟ್ಟು ಗ್ರಾಮದ ಪರಂಪಾರಾಗತ ನಾಟಿ ವೈದ್ಯ ಕೆ. ಹರೀಶ್ ಸಾಮಗ ರವರು ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ರ್ ಪೀಸ್ ಎಜುಕೇಶನ್ ದೆಹಲಿ ಇವರಿಂದ ತಮ್ಮ ವೈದ್ಯಕೀಯ ಸಾಧನೆಗೆ ಗೌರವ ಡಾಕ್ಟರೇಟ್ ಪುರಸ್ಕ್ರತರಾಗಿದ್ದು,ಈ ಬಗ್ಗೆ ಅವರ ಅಭಿಮಾನಿ ಬಳಗದ ವತಿಯಿಂದ ನಾಗರಿಕ ಗೌರವ ಸನ್ಮಾನ ಕಾರ್ಯಕ್ರಮ ಜ.27 ರಂದು ಕೆಳಾರ್ಕಳಬೆಟ್ಟು “ಜೈಮಿನಿ” ಯಲ್ಲಿ ನಡೆಯಿತು.IMG-20190128-WA0039 (1)

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಉದ್ಯಮಿ,ಸಾಮಾಜಿಕ ಕಾರ್ಯಕರ್ತ ಮಧುಸೂಧನ್  ಹೇರೂರು,ಕೆ ಹರೀಶ್ ಸಾಮಗರವರು ಕೇವಲ 4 ಗಂಟೆಯ ಚಿಕಿತ್ಸೆಯಲ್ಲಿ ಮಣ್ಣು,ಔಷಧಎಣ್ಣೆ,ಬಾಳೆ ಎಲೆ ನೀರಿನ ಮೂಲಕ ದೇಹದ ಕಲ್ಮಷ ಹೊರ ಹಾಕಿ ಅಕ್ಯುಪ್ರೇಶರ್ ವಿಧಾನದಿಂದ ದೇಹದ ರಕ್ತ ಸಂಚಾರ ಸರಿಪಡಿಸಿ,ನಾದ ತರಂಗ ಚಿಕಿತ್ಸೆ ಮೂಲಕ ದೇಹದ ಜೀವ ಕೋಶಗಳನ್ನು ಸರಿಪಡಿಸುವ ಈ ವೈದ್ಯಕೀಯ ಆವಿಷ್ಕಾರ ದೇಶದಲ್ಲಿ ಮೊದಲಾಗಿದೆ.ಸಾವಿರಾರು ಮಂದಿ ರೋಗಿಗಳಿಗೆ ತಮ್ಮ ವೈದ್ಯಕೀಯ ಸೇವೆ ನೀಡಿರುತ್ತಾರೆ.ಅವರ ಸಾಧನೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.

ನಾವು ಹಲವಾರು ಋಣ ಹಿಡಿದು ಈ ಭೂಮಿಗೆ ಬಂದಿದ್ದೇವೆ ಈ ಋಣವನ್ನು ನಾವು ತೀರಿಸಬೇಕಾದರೆ ಸೇವಾ ಮನೋಭಾವನೆ ಅದೇರಿತಿ ಕರ್ತವ್ಯ ನಿಷ್ಟೆ ಬೆಳೆಸಬೇಕೆಂದರು. ತೆಂಕನಿಡಿಯೂರು ಗ್ರಾ.ಪಂ ಅದ್ಯಕ್ಷ ಕೃಷ್ಣಯ್ಯ ಶೆಟ್ಟಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನಾಗರಿಕರ ಪರವಾಗಿ,ಅಭಿಮಾನಿ ಬಳಗದ ವತಿಯಿಂದ ಅವರನ್ನು ಗೌರವಿಸಲಾಯಿತು.ಕುಟುಂಬ ಸದಸ್ಯರು ವೇದಿಕೆಯಲ್ಲಿದ್ದರು. ನಂತರ ಮಾತನಾಡಿದ ಡಾ|| ಕೆ.ಹರೀಶ್ ಸಾಮಗ ಈ ಗೌರವ ಡಾಕ್ಟರೇಟ್ ಪುರಸ್ಕಾರ ತಾನು ನನ್ನ ಗುರುಗಳು ಅದೇ ರೀತಿ ತಂದೆ ತಾಯಿಗೆ ಸಮರ್ಪಿಸುತ್ತೇನೆ ಮುಂದೆಯೂ ಮತ್ತಷ್ಟು ಪ್ರಬುದ್ದತೆಯಿಂದ ಜನರ ಸೇವೆ ಮಾಡುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸುಬ್ರಾಯ ನಾಯ್ಕ,ಕಮಲಾ ಬಾಯಿ ಅದೇ ರೀತಿ ನಾಟಿ ವೈದ್ಯ ಪದ್ದತಿಯಲ್ಲಿ ಸಹಾಯಕರಾಗಿರುವ ಶ್ರೀನಿವಾಸ್ ಪ್ರಸಾದ್ ಮಯ್ಯ,ವಿಜಯ ಕುಮಾರ್,ರೇವತಿ,ಸುಂದರ್ ಕೋಟ್ಯಾನ್,ದಯಾನಂದ ಕಾಮತ್,ಶ್ರೀನಿವಾಸ್ ರಾವ್ ರವರನ್ನು ಸನ್ಮಾನಿಸಲಾಯಿತು. ನಾಗರಿಕರು ಮತ್ತು ಅವರ ಅಭಿಮಾನಿಗಳು ತಮ್ಮ ಶುಭ ಹಾರೈಕೆ ಸಲಿ ್ಲಸಿದರು.ರಾಘವೇಂದ್ರ ಕರ್ವಾಲು ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *