ಉಡುಪಿ: ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಬರೆದಿರುವ ‘ಸುಜ್ಞಾನ’ ಮಕ್ಕಳ ಕಥಾ ಸಂಕಲನ ಕೃತಿಯ ಬಿಡುಗಡೆ ಕಾರ್ಯಕ್ರಮವು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ಉಡುಪಿ ಕಾಣಿಯೂರು ಮಠದ ಆಶ್ರಯದಲ್ಲಿ ಮಂಗಳವಾರ ನಡೆಯಿತು. ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಕೃತಿ ಬಿಡುಗಡೆಗೊಳಿಸಿದರು.IMG-20190129-WA0138ಶ್ರೀ ಶ್ರೀವಿದ್ಯಾವಲ್ಲಭ ತೀರ್ಥರು ಪುಸ್ತಕ ಬಿಡುಗಡೆಗೊಳಿಸಿ ಹರಸುತ್ತಾ, ತಾರಾನಾಥ್ ಮೇಸ್ತ ಶಿರೂರು ಅವರು, ಮಕ್ಕಳಿಗಾಗಿ ಬರೆದ ಒಳ್ಳೆಯ ಪುಸ್ತಕ ‘ಸುಜ್ಞಾನ’. ಈ ಸಣ್ಣ ಸಣ್ಣ ಕತೆಗಳ ಸಂಕಲನವು, ಮಕ್ಕಳಲ್ಲಿ ಒಳ್ಳೆಯ ಆದರ್ಶ, ವ್ಯಕ್ತಿತ್ವ, ಚಿಂತನೆ ಮತ್ತು ಒಳ್ಳೆಯ ಬುದ್ದಿಯನ್ನು ನೀಡಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸಬಲ್ಲ ದೃಷ್ಟಾಂತದಿಂದ ತುಂಬಿದೆ. ಕತೆಗಳ ಮೂಲಕ ಮಕ್ಕಳು ಸುಲಭದಲ್ಲಿ ಜ್ಞಾನ ಗ್ರಹಣ ಮಾಡುತ್ತಾರೆ. ಅವಶ್ಯವಾಗಿ ವಿದ್ಯಾರ್ಥಿಗಳು ಇದನ್ನು ಓದಬೇಕಾದ ಕೃತಿ ಎಂದು ತಿಳಿಸಿದರು. ಪ್ರಾಣಿ ಹಿಂಸೆ ಹೆಚ್ಚುತ್ತಿರುವ ಈ ಕಾಲದಲ್ಲಿ ಪ್ರಾಣಿದಯೆಯ ಮಹತ್ವ ಮುಖ್ಯ. ಸಮಾಜಕ್ಕೆ ಒಳ್ಳೆಯ ಮೌಲ್ಯ ನೀಡುವ ಕತೆಗಳನ್ನು ಬರೆದ ಲೇಖಕ ತಾರಾನಾಥ ಮೇಸ್ತ ಶಿರೂರು ಅವರ ಶ್ರಮ ಸ್ತುತ್ಯಾರ್ಹವೆಂದರು.

ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಹಿರಿಯ ಸಂಶೋಧಕ ಹೆರೆಂಜೆ ಕೃಷ್ಣ ಭಟ್, ಸಾಹಿತಿ ಹರಿಕೃಷ್ಣ ರಾವ್ ಸಗ್ರಿ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್ ಕಿದಿಯೂರ್, ಶ್ರೀನಿವಾಸ ಸರಳಾಯ ಹಾಗೂ ಐಸಿರಿ ಸುರೇಂದ್ರ ಕುಕ್ಯಾನ್, ಲೇಖಕ ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *