ಮೂಡುಬಿದಿರೆ: ಮಾನವ ಜಗತ್ತಿನಲ್ಲಿ ಹುಟ್ಟು ಹಬ್ಬ ಆಚರಣೆ ಎಂಬುದು ಹಿಂದಿನಿಂದಲೂ ರೂಢಿಸಿಕೊಂಡ ಸಂಸ್ಕøತಿ. ಹಬ್ಬ ಎಂಬುದು ಜನರನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ. ಜಾತಿ ಧರ್ಮ ಯಾವುದೇ ಇದ್ದರು, ದೇವರ ಮೇಲೆ ಭಕ್ತಿ ಮತ್ತು ಶ್ರದ್ಧೆಯನ್ನು ಇಟ್ಟುಕೊಳ್ಳಬೇಕು. ಕ್ರಿಸ್‍ಮಸ್ ಪ್ರೀತಿ ಮತ್ತು ಶಾಂತಿ ಸಾರುವ ಹಬ್ಬವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಡುಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದ 17ನೇ ವರ್ಷದ ಆಡ್ಲಾ ಕ್ರಿಸ್‍ಮಸ್ ನೈಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಕ್ಷಿಕೆರೆ ಚರ್ಚ್‍ನ ಧರ್ಮಗುರು ಮೆಲ್ವಿನ್ ನೊರೊನ್ಹ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಜಗದೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟೀಫನ್ ಮೆಂಡಿಸ್ ಸ್ವಾಗತಿಸಿದರು. ಅರುಣ್ ಮೆಂಡಿಸ್ ವಂದಿಸಿದರು. ಫ್ಲೋರಾ ಮೆಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿವಿಧ ಕಲಾ ತಂಡಗಳಿಂದ ದೇಶೀ ಮತ್ತು ಪಾಶ್ಚಾತ್ಯ ನೃತ್ಯ ಕಾರ್ಯಕ್ರಮ ನಡೆಯಿತು.
