ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಐದು ದಿನಗಳ ಕಾಲ ನಡೆದ 79ನೇ ಅಖಿಲ ಭಾರತ ವಿ.ವಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಅತಿಥೇಯ ಮಂಗಳೂರು ವಿಶ್ವವಿದ್ಯಾಲಯ 188 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆಯುವ ಮೂಲಕ ಹ್ಯಾಟ್ರಿಕ್ ಚಾಂಪಿಯನ್ ಆಗಿ ಮೂಡಿಬಂದಿದೆ. ಕ್ರೀಡಾಕೂಟದ ಒಟ್ಟು 13 ನೂತನ ಕೂಟ ದಾಖಲೆಗಳಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳು 5 ಕೂಟ ದಾಖಲೆಗಳೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ.

ALL INDIA SPORTS- Mangalore VV Champion
109 ಅಂಕಗಳೊಂದಿಗೆ ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಕೊಟ್ಟಾಯಂ ರನ್ನರ್ ಅಪ್ ಹಾಗೂ 69 ಅಂಕಗಳೊಂದಿಗೆ ಕ್ಯಾಲಿಕಟ್ ವಿಶ್ವವಿದ್ಯಾಲಯ ತೃತೀಯ ಸ್ಥಾನ ಪಡದಿದೆ.
ಎರಡು ವಿಭಾಗಗಳಲ್ಲೂ ಮಂಗಳೂರು ಚಾಂಪಿಯನ್:
ಮಹಿಳಾ ವಿಭಾಗದಲ್ಲಿ 78 ಅಂಕ ಹಾಗೂ ಪುರುಷರ ವಿಭಾಗಗಳಲ್ಲಿ 110 ಅಂಕಗಳನ್ನು ಪಡೆದು ಮಂಗಳೂರು ವಿಶ್ವವಿದ್ಯಾಲಯ ಚಾಂಪಿಯನ್ ಆಗಿ ಮೂಡಿಬಂದಿದೆ. ಮಹಿಳಾ ವಿಭಾಗದಲ್ಲಿ ಕೊಟ್ಟಾಯಂ ವಿ.ವಿ(74 ಅಂಕ) ರನ್ನರ್ ಅಪ್ ಹಾಗೂ ಕ್ಯಾಲಿಕಟ್ ವಿ.ವಿ 33 ಅಂಕ ಪಡೆದು ತೃತೀಯ ಸ್ಥಾನಿಯಾಗಿದೆ. ಪುರುಷರ ವಿಭಾಗದಲ್ಲಿ ಕೊಟ್ಟಾಯಂ ವಿ.ವಿ 47 ಅಂಕ ಪಡೆದು ರನ್ನರ್‍ಅಪ್ ಹಾಗೂ ಕ್ಯಾಲಿಕಟ್ ವಿ.ವಿ 36 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದೆ.

ಮಹಿಳಾ ವಿಭಾಗದಲ್ಲಿ ತಿರುಚಿನಪ್ಪಳ್ಳಿ ಭಾರದೀದಾಸನ್ ವಿಶ್ವವಿದ್ಯಾಲಯದ 200ಮೀ. ಓಟಗಾರ್ತಿ ಧನಲಕ್ಷ್ಮೀ ಎಸ್. 1121 ಅಂಕಗಳೊಂದಿಗೆ ಹಾಗೂ ಪುರುಷರ ವಿಭಾಗದಲ್ಲಿ ಮುಂಬೈ ವಿಶ್ವವಿದ್ಯಾಲಯದ ತ್ರಿಂಪಲ್‍ಜಂಪ್‍ಪಟು ಜೈ ಷಾ ಪ್ರದೀಪ್ 1086 ಅಂಕಗಳೊಂದಿಗೆ ಬೆಸ್ಟ್ ಅಥ್ಲೆಟಿಕ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

13 ಕೂಟ ದಾಖಲೆ:
ಅಥ್ಲೆಟಿಕ್ಸ್‍ನ ಮಹಿಳಾ ವಿಭಾಗದಲ್ಲಿ 8 ಹಾಗೂ ಪುರುಷರ ವಿಭಾಗದಲ್ಲಿ 5 ನೂತನ ಕೂಟ ದಾಖಲೆಗಳು ಸೇರಿ ಒಟ್ಟು 13 ಕೂಟ ದಾಖಲೆಗಳಾಗಿವೆ
* 100ಮೀ.(ಪುರುಷರ ವಿಭಾಗ) – ಇಲಕ್ಯಾದಾಸನ್ – ಮಂಗಳೂರು ವಿ.ವಿ
* ಡೆಕಾಥ್ಲಾನ್ .(ಪುರುಷರ ವಿಭಾಗ) – ಕೃಷ್ಣ ಕುಮಾರ್ – ಮಂಗಳೂರು ವಿ.ವಿ
* ಜವಲಿನ್ ಥ್ರೋ.(ಮಹಿಳಾ ವಿಭಾಗ)- ಪೂನಂ ರಾಣಿ-ಮಂಗಳೂರು ವಿ.ವಿ
* 3000 ಮೀ. ಸ್ಟಿಪಲ್‍ಚೇಸ್ (ಮಹಿಳಾವಿಭಾಗ)- ಶೀತಲ್ ಭಗತ್ ಝಮಾಜಿ-ಮಂಗಳೂರು ವಿ.ವಿ
* ಹ್ಯಾಮರ್ ಥ್ರೋ (ಮಹಿಳಾ ವಿಭಾಗ) – ಕೆ.ಎಂ ರೀತು ಧೀಮಾನ್-ಮಂಗಳೂರು ವಿ.ವಿ
* ತ್ರಿಪಲ್‍ಜಂಪ್-(ಪುರುಷರ ವಿಭಾಗ)- ಜೈ ಷಾ ಪ್ರದೀಪ್ – ಮುಂಬೈ ವಿ.ವಿ
* 1500ಮೀ.(ಪುರುಷರ ವಿಭಾಗ)-ಅಭಿನಂದ್ ಸುಂದರೇಶನ್0 ಕೇರಳ ವಿ.ವಿ
* ಲಾಂಗ್ ಜಂಪ್(ಪುರುಷರ ವಿಭಾಗ)- ಮುಹಮ್ಮದ್ ಅನೀಸ್- ಕ್ಯಾಲಿಕಟ್ ವಿ.ವಿ
* 100ಮೀ (ಮಹಿಳಾ ವಿಬಾಗ)-ಎನ್.ಎಸ್ ಸೆಮಿ – ಕೊಟ್ಟಾಯಂ ವಿ.ವಿ
* ಹೈಜಂಪ್-(ಮಹಿಳಾ ವಿಭಾಗ) ಎಂಜಲ್ ಪಿ.ದೇವಸನ- ಕ್ಯಾಲಿಕಟ್ ವಿ.ವಿ
* ಪೋಲ್‍ವಾಲ್ಟ್(ಮಹಿಳಾ ವಿಭಾಗ)- ಮರಿಯಾ ಜೈಸನ್-ಜೈನ್ ವಿ.ವಿ ಬೆಂಗಳೂರು
* 200ಮೀ.(ಮಹಿಳಾ ವಿಭಾಗ)- ಧನಲಕ್ಷ್ಮೀ ಎಸ್.( ತಿರುಚಿನಾಪಳ್ಳಿ ವಿ.ವಿ)
* 4*400 ರಿಲೇ(ಮಹಿಳಾ ವಿಭಾಗ)- ಕ್ಯಾಲಿಕಟ್ ವಿ.ವಿ

ಆಳ್ವಾಸ್ ಕ್ರೀಡಾಪಟುಗಳಿಂದ 5 ಕೂಟ ದಾಖಲೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಮೂರನೇ ಬಾರಿಗೆ ಮೂಡುಬಿದಿರೆಯಲ್ಲಿ ಆಯೋಜಿಸಲಾದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ ವ್ಯವಸ್ಥಿತ ರೀತಿಯಲ್ಲಿ ನಡೆಯುವ ಮೂಲಕ ಮಾದರಿ ಕ್ರೀಡಾಕೂಟವಾಗಿ ಮೂಡಿಬಂದಿದೆ. ಕೂಟದ ಐದು ದಿನ ದೇಶದ ವಿವಿಧ ವಿಶ್ವವಿದ್ಯಾಲಯಗಳ ಕ್ರೀಡಾಪಟುಗಳು ಸೇರಿದಂತೆ 5 ಸಾವಿರ ಮಂದಿಗೆ ಉಚಿತ ವಸತಿ, ಊಟ ವ್ಯವಸ್ಥೆ, ಪ್ರತಿದಿನವೂ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವ ಮೂಲಕ `ಕ್ರೀಡಾ ವೈಭವ’ ವಿಶೇಷ ಗೌರವ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಳ್ವಾಸ್ ಕ್ರೀಡಾಪಟುಗಳಿಗೆ ಹಾಗೂ 79ನೇ ಅ.ಭಾ.ವಿ.ವಿ ಅಥ್ಲೆಟಿಕ್ಸ್‍ನಲ್ಲಿ ನೂತನ ಕೂಟ ದಾಖಲೆ ಮಾಡಿದ 13 ಮಂದಿ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆ ಪ್ರೋತ್ಸಾಹಿಸಿದೆ.
ಆಯೋಜನೆಯಲ್ಲಿ ಗಮನಸೆಳೆದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕ್ರೀಡಾ ಸಾಧನೆಯಲ್ಲಿಯೂ ಮುಂಚೂಣಿಯನ್ನು ಸಾಧಿಸಿದೆ. ಈ ಬಾರಿ ಅಥ್ಲೆಟಿಕ್ಸ್‍ನಲ್ಲಿ 13 ನೂತನ ಕೂಟ ದಾಖಲೆಯಲ್ಲಿ ಆಳ್ವಾಸ್ ಐದು ಕೂಟ ದಾಖಲೆ ಮಾಡಿದೆ. ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ ಆಳ್ವಾಸ್‍ನ ಕ್ರೀಡಾಪಟುಗಳಾದ ಇಲಕ್ಯಾದಾಸನ್, ಕೃಷ್ಣ ಕುಮಾರ್, ಪೂನಂ ರಾಣಿ, ಶೀತಲ್ ಭಗತ್ ಝಮಾಜಿ, ಕೆ.ಎಂ ರೀತು ಧೀಮಾನ್ ನೂತನ ಕೂಟ ದಾಖಲೆ ಮಾಡುವ ಮೂಲಕ ಆಳ್ವಾಸ್ ಹಾಗೂ ಮಂಗಳೂರು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
180 ವಿಶ್ವವಿದ್ಯಾಲಯದ 3,303 ಕ್ರೀಡಾಪಟುಗಳು, ಸಾವಿರಕ್ಕೂ ಅಧಿಕ ಕ್ರೀಡಾ ಅಧಿಕಾರಿಗಳು, ತರಬೇತುದಾರರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *