ಪೊಳಲಿ: ಎಸ್. ಆರ್. ಫ್ರೆಂಡ್ಸ್ ಪೊಳಲಿ ನೂತನವಾಗಿ ಪೊಳಲಿಯಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಇದರ ಉದ್ಘಾಟನಾ ಸಮಾರಂಭವು ಭಾನುವಾರ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ತಂಗುದಾಣ ಉದ್ಘಾಟಡಿಸಿ ಆಶಿರ್ವದಿಸಿದರು.
ಪರ್ದಕಂಡ ವಾಸುದೇವ ಭಟ್ ಪೊಳಲಿ ದೀಪ ಪ್ರಜ್ವಲನೆ ಮಾಡಿದರು. ಹಳೆಯ ತಂಗುದಾಣವನ್ನು ತೆಗೆದು ನೂತನವಾಗಿ ನಿರ್ಮಿಸಿದ್ದು, ಬಸ್ ಪ್ರಯಾಣಿಕರಿಗೆ ತಂಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪೊಳಲಿ ಅಟೋ ರಿಕ್ಷಾ ಚಾಲಕ ಮಾಲಕರಿಂದ ಕುಡಿಯುವ ನೀರಿನ ಪಿಲ್ಟರ್ ಅನ್ನು ಬಸ್ಸು ತಂಗುದಾಣದ ಉದ್ಘಾಟನಾ ಸಂದರ್ಭದಲ್ಲಿ ನೀಡಿದರು.
ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ತಾ.ಪಂ.ಸದಸ್ಯ ಯಶವಂತ ಪೂಜಾರಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಉಧ್ಯಮಿಗಳಾದ ಜಯರಾಮ್ ಕೃಷ್ಣ ಪೊಳಲಿ, ಭುವನೇಶ್ ಕೋಟ್ಯಾನ್ ಪಚಿನಡ್ಕ, ವೆಂಕಟೇಶ್ ನಾವಡ ಪೊಳಲಿ, ಗ್ರಾ.ಪಂ. ಸದಸ್ಯ ಲೋಕೇಶ್ ಭರಣಿ, ರಾಜೇಶ್ ಪಡ್ಪು ಮತ್ತಿತರರು ಭಾಗವಹಿಸಿದ್ದರು.





