ಗುರುಪುರ: ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಕಾಲಾವಧಿ ದೊಂಪದಬಲಿ ಉತ್ಸವ ಡಿ.29ಶನಿವಾರ ಮತ್ತು ಡಿ.30 ಭಾನುವಾರ ಮಹಿಷಂದಾಯ, ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ,ಬಂಟ ದೈವಗಳ ನೇಮ ಜರಗಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ ಮತ್ತು ಗುತ್ತುಗಳ ಯಾಜಮಾನರು, ದೈವದ ದರ್ಶನ ಪಾತ್ರಿಗಳಾದ ಚಂದ್ರಹಾಸ ಕೌಡೂರು, ತನಿಯಪ್ಪ ಪೂಜಾರಿ ಹಾಗೂ ಊರಪರವೂರಿನ ಭಕ್ತರು ಉಪಸ್ಥಿತರಿದ್ದರು.

