ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ದೀಪಸ್ತಂಭದ ನವೀಕರಣವನ್ನು ಗಾಣಿಗ ಸಮಾಜದವರು ಸೇವಾರೂಪವಾಗಿ ಮಾಡಲಿದ್ದಾರೆ.ದೀಪಸ್ತಂಭ ನವೀಕರಣದ ಮಹೂರ್ತವು ಶುಕ್ರವಾರ ನಡೆಯಿತು.
ಶ್ರೀ ಕ್ಷೇತ್ರ ಹಾಗೂ ಗಾಣಿಗ ಸಮಾಜ ಪ್ರಾಚೀನ ಕಾಲದಿಂದಲೂ ಅವಿನಾಭಾವ ಸಂಬಂಧ ಹೊಂದಿರುವುದು ತಿಳಿದು ಬಂದಿದೆ ಶ್ರೀ ಕ್ಷೇತ್ರದಲ್ಲಿ ಗಾಣಿಗ ಸಮಾಜದ ವತಿಯಿಂದ ಹಲವು ಸೇವೆಗಳು ನಡೆಯುತ್ತಿದ್ದು 1955ನೇ ಇಸವಿಯಲ್ಲಿ ಸಮಾಜದ ಹಿರಿಯರು ಶ್ರೀ ದೇವಿಗೆ ಕಂಚು ದೀಪದಸೇವೆಯನ್ನು ಸಮರ್ಪಿಸಿರುತ್ತಾರೆ.28vp polali-3

28vp polali-2

 

deepasthamba

29deepaವರ್ಷಂಪ್ರತಿ ಜಾತ್ರೆಯ ಸಮಯದಲ್ಲಿಯೂ ಪ್ರಥಮ ಚೆಂಡಿನ ದಿವಸ ಕಂಚು ದೀಪವನ್ನು ಬೆಳಗಿಸುವೆ ಸೇವೆ ಮಳಲಿ ಗಾಣಿಗರ ಸಮಾಜದ ಮೂಲಕ ಸಮಸ್ತ ಗಾಣಿಗ ಬಾಂಧವರು ನಡೆಸಿರುತ್ತರೆ.ಜೀಣೋದ್ಧಾರಗೊಳ್ಳುತ್ತಿರುವ ಶ್ರೀಕ್ಷೇತ್ರ ಪೊಳಲಿಯ ದೀಪಸ್ತಂಭವನ್ನು ನವೀಕರಣಗೊಳಿಸಲು  ಗಾಣಿಗ ಸಮಾಜದವರು  ದೇವಿಯಲ್ಲಿ ಪ್ರಾರ್ಥಿಸಿದರು. ದೇವಳದ ಅರ್ಚಕರಾದ ಪರಮೇಶ್ವರ ಭಟ್ ಪ್ರಸಾದ ನೀಡಿ ದೀಪಸ್ತಂಭದ ಮೂಹೂರ್ತ ನೆರವೇರಿಸಿದರು.  ಈ ಸಂದರ್ಭದಲ್ಲಿ ಗಾಣಿಗ ಸಮಾಜದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *