ಮೂಡುಬಿದಿರೆ: ಶಾಲಾ ಕಾಲೇಜುಗಳಲ್ಲಿ ಬೋಧಿಸಲ್ಪಡುವ ಪಠ್ಯ ವಿಷಯದ ಜೊತೆಗೆ ಬದುಕಿನ ವಿದ್ಯೆ ಮುಖ್ಯ. ನಮ್ಮ ಕೆಲಸವನ್ನು ನಾವು ಮಾಡುವುದರೊಂದಿಗೆ ರಾಷ್ಟ್ರಕ್ಕೆ ಕೆಲಸ ಮಾಡುವವರೆಗೂ ನಮ್ಮ ಸೇವೆ ಮುಂದುವರಿಯಬೇಕು. ಬದುಕನ್ನು ಕಲಿಸಿಕೊಡುವ ಪರಿಕಲ್ಪನೆಯನ್ನು ರಾಷ್ಟ್ರೀಯ ಸ್ವೇಯಂ ಸೇವಾ ಸಂಘ ಹೊಂದಿದೆ. ಬದುಕಿನ ತಿಳುವಳಿಕೆ ಖಂಡಿತವಾಗಿ ಎನ್‍ಎಸ್‍ಎಸ್ ಮುಖಾಂತರ ಸಿಗುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

???????????????????????????????
ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಆಳ್ವಾಸ್ ಪದವಿ ಕಾಲೇಜು ಇದರ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಮಿತ್ತಬೈಲು ಶ್ರೀರಾಮ ಭಜನಾ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.

Alvas NSS (1)
ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿದರು. ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಕೆಡಿಪಿ ಸದಸ್ಯ ವಾಸುದೇವ ನಾಯಕ್, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಗಿರಿಧರ್ ಪಿ. ನಾಯಕ್ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಶಿಬಿರಾಧಿಕಾರಿಗಳಾದ ವಸಂತ ಎ., ನವ್ಯ, ಸಹ ಶಿಬಿರಾಧಿಕಾರಿಗಳಾದ ದೀಕ್ಷಿತಾ, ವರುಣ್ ಡೊಂಗ್ರೆ ಉಪಸ್ಥಿತರಿದ್ದರು.
ದೀಕ್ಷಾ ಸ್ವಾಗತಿಸಿದರು. ಕ್ಷಮಾ ಕಾರ್ಯಕ್ರಮ ನಿರೂಪಿಸಿದರು. ಗೌತಮಿ ವಂದಿಸಿದರು.

By suddi9

Leave a Reply

Your email address will not be published. Required fields are marked *