ಮೂಡುಬಿದಿರೆ: ಕೇಂದ್ರ ಸರ್ಕಾರ 500, 1000 ರೂ ನೋಟನ್ನು ಬ್ಯಾನ್ ಮಾಡುವ ಮೂಲಕ ಕಾರ್ಮಿಕರನ್ನು ಸಮಸ್ಯೆಗೆ ಸಿಲುಕಿಸಿರುವ ಮೋದಿ ಸರ್ಕಾರವು ಇದೀಗ ಕಾರ್ಮಿಕರ ಕಲ್ಯಾಣ ನಿಧಿಗೆ ಕನ್ನ ಹಾಕಲು ಹೊರಟಿದ್ದು ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸಿಡಬ್ಲ್ಯೂಎಫ್‍ಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕೆ. ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

???????????????????????????????
ಇಲ್ಲಿನ ಸಮಾಜ ಮಂದಿರದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಮಾವೇಶ ಮತ್ತು ಮಾಹಿತಿ ಶಿಬಿರದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕೆಪಿಆರ್‍ಎಸ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಡಬ್ಲ್ಯೂಎಫ್‍ಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಿಐಟಿಯುನ ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ, ಮುಖಂಡರಾದ ಸುಂದರ ಶೆಟ್ಟಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಮೂಡುಬಿದಿರೆ ವಲಯದ ಅಧ್ಯಕ್ಷ ಜಯಾನಂದ ಪೂಜಾರಿ ಮಾರೂರು, ಕೋಶಾಧಿಕಾರಿ ಶ್ರೀಧರ ಆಚಾರಿ, ಉಪಾಧ್ಯಕ್ಷರುಗಳಾದ ಸೀತಾರಾಮ ಶೆಟ್ಟಿ, ದೂಜ ಪೂಜಾರಿ ವಾಲ್ಪಾಡಿ, ಸಂಜೀವ ಪೂಜಾರಿ ಮಾರೂರು, ಕೃಷ್ಣಪ್ಪ ಪೂಜಾರಿ ಹೊಸಬೆಟ್ಟು, ನಿತ್ಯಾನಂದ ಆಚಾರಿ ನಿಡ್ಡೋಡಿ, ಸಿಪಿಐಎಂನ ಮುಖಂಡರಾದ ರಾಧಾ, ಲಕ್ಷ್ಮೀ, ತಸ್ರಿಫ್ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್‍ನ ಮೂಡುಬಿದಿರೆ ವಲಯದ ಪ್ರಧಾನ ಕಾರ್ಯದರ್ಶಿ ಶಂಕರ ವಾಲ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *