ಮೂಡುಬಿದಿರೆ: ಮುಂದಿನ ಚುನಾವಣೆಯಲ್ಲಿ ಮತ್ತೆ ಪ್ರದಾನಿ ನರೇಂದ್ರ ಮೋದಿಯವರ ಪ್ರಚಾರದ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಟೀಮ್ ಮೋದಿ ಅಭಿಯಾನಕ್ಕೆ ಮೂಡಬಿದಿರೆಯ ಹನುಮಂತ ದೇವಸ್ಥಾನದಿಂದ ಬೈಕ್ ಮತ್ತು ಕಾರುಗಳಲ್ಲಿ ಸಾಗಿದ ಯುವಕರ ತಂಡ ಮೂಡಬಿದಿರೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಚಹಾ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಬಸ್ ನಿಲ್ದಾಣದಲ್ಲಿ ಚಹಾ ವಿತರಣೆ ಮಾಡಿ ಟೀಮ್ ಮೋದಿ ಸಂಘಟನೆಗೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಮಾತನಾಡಿ, 2014 ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ದೇಶಾದ್ಯಂತ ಯುವಕರು ಒಂದೊಂದು ರೀತಿಯ ತಂಡ ರಚನೆ ಮಾಡಿದ್ದರು. ಇದೀಗ ಮತ್ತೊಂದು ಚುನಾವಣೆ ನಮ್ಮ ಕಣ್ಣ ಮುಂದಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಚಾರ ಮಾಡುವ ಇರಾದೆ ಟೀಮ್ ಮೋದಿಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ಉಮನಾಥ್ ಕೋಟ್ಯಾನ್, ಪ್ರಮುಖರಾದ ಜಗದೀಶ್ ಅಧಿಕಾರಿ, ಬಿಜೆಪಿ ಮುಖಂಡರಾದ ಗೋಪಾಲ್ ಶೆಟ್ಟಿಗಾರ್, ನಾಗರಾಜ ಪೂಜಾರಿ, ಟೀಂ ಮೋದಿ ಸಂಘಟನೆಯ ಪ್ರಮುಖರಾದ ಅವಿನಾಶ್ ಬಂಗೇರ, ಪ್ರಖ್ಯಾತ್ ಶೆಟ್ಟಿ, ವಿನಿತ್ ಕೋಟ್ಯಾನ್, ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಬಜರಂಗದಳ ಪ್ರಮುಖ ಸುನಿಲ್ ಕುಮಾರ್ ಇರುವೈಲ್ ಸಹಿತ ಮೋದಿ ಅಭಿಮಾನಿಗಳು ಭಾಗವಹಿಸಿದರು.
