ಮೂಡುಬಿದಿರೆ: ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ನವೆಂಬರ್ ತಿಂಗಳಿನಲ್ಲಿ ಜನಿಸಿರುವ ಹೆಣ್ಣು ಮಗುವಿಗೆ ಸರ್ಕಾರವು ರೂ 1,000 ಪ್ರೋತ್ಸಾಹಧನವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು ಅದರಂತೆ ಶಿರ್ತಾಡಿ ಪಂಚಾಯಿತಿ ವ್ಯಾಪ್ತಿಯ ಮಕ್ಕಿಯ ಸುರೇಶ್-ವಿಜಯ ದಂಪತಿಗೆ ಜನಿಸಿರುವ ಮಗು ಪ್ರಥ್ವಿಗೆ ಪಂಚಾಯಿತಿ ಅಧ್ಯಕ್ಷೆ ಲತಾ ಹೆಗ್ಡೆ ಅವರು ಮನೆಗೆ ತೆರಳಿ ಪ್ರೋತ್ಸಾಹಧನ ಮತ್ತು ಅಭಿನಂದನಾ ಪತ್ರವನ್ನು ವಿತರಿಸಿದರು.

Shirthady Prostahadana
ಪಂಚಾಯಿತಿ ಕಾರ್ಯದರ್ಶಿ ರವಿ ಕಾಂಚನ್ ಅವರು ಕುಟುಂಬಕ್ಕೆ ತೆಂಗಿನ ಸಸಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮಕ್ಕಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಜನಲತಾ ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *