ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸಿದ ನೂತನ ಧ್ವಜಸ್ಥಂಭದ ಕೆಲಸಗಳು ಭರದಿಂದ ಸಾಗುತ್ತಿದೆ. ಮರದ ಕೆತ್ತನೆಯನ್ನು ಪೂರ್ಣಗೊಳಿಸಿ ಸುಮಾರು 8000 ಲೀಟರ್ ಶುದ್ಧ ಎಳ್ಳೆಣ್ಣೆಯಲ್ಲಿ ಇರಿಸಲಾಗಿದ್ದು, ಧ್ಜಜಸ್ಥಂಭದ ಶುದ್ಧ ಎಳ್ಳೆಣ್ಣೆಯನ್ನು ಭಾನುವಾರ ತೆಗೆಯಲಾಯಿತು. ಧ್ವಜಸ್ಥಂಭದ ಪೀಠ, ಆಧಾರ ಶಿಲೆ, ಕೊಳವೆ ಕಲ್ಲು, ದಂಬೆಕಲ್ಲಿನ ಕೆತ್ತನೆ ಕೆಲಸವು ಶ್ರೀಕೃಷ್ಣ ಆಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ನಡೆಯುತ್ತಿದೆ.

ಡಿ.18ರ ಮಂಗಳವಾರ ಬೆಳಿಗ್ಗೆ 9ರಿಂದ 10ರ ಒಳಗೆ ಧ್ವಜಸ್ಥಂಭದ ಮರವನ್ನು ತೆಗೆಯಲಿರುವುದು. ಡಿ.21ರಂದು ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಭೂಮಿ ಪೂಜೆ, ಡಿ.28ರಂದು ಧ್ವಜಸ್ಥಂಭದ ಪೀಠ, ಆಧಾರ ಶಿಲೆ ಕ್ಷೇತ್ರಕ್ಕೆ ತರಲಿಕ್ಕಿದೆ. ಡಿ.31 ಆಧಾರ ಶಿಲಾನ್ಯಾಸಕ್ಕೆ ದ್ರವ್ಯಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಜನವರಿ 2ರ ಸಾಯಂಕಾಲ ಧ್ವಜಸ್ಥಂಭದ ಮರಕ್ಕೆ ಕುತ್ತಿಪೂಜೆ(ಮರಮಹೂರ್ತ). ಜ.10 ಧ್ವಜಸ್ಥಂಭದ ಮರಕ್ಕೆ ಕಂಚಿನವರಿಂದ ತಾಮ್ರ ಹೊಡೆಯುವುದು, ಜ.21ರಂದು ಕ್ಷೇತ್ರದ ರಾಜಾಂಗಣದಲ್ಲಿ ನೂತನ ಧ್ವಜಸ್ಥಂಭದ ಸ್ಥಾಪನೆ ನಡೆಸಲಾಗವುದು ಎಂದು ನಿರ್ಧರಿಸಲಾಗಿದೆ.
