ಬಂಟ್ವಾಳ,: ಕೇಂದ್ರಾಡಳಿತದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಪಕ್ಷವು ಜನವಿರೋಧಿ ಆಡಳಿತಕ್ಕೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಫ್. ಉಮ್ಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪುದು ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಬುಧವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಪುದು ಗ್ರಾ.ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಮಾಜಿ ಉಪಾಧ್ಯಕ್ಷ &ಹಾಲಿ ಸದಸ್ಯ ಮತ್ತು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ನೂತನ ಪುದು ವಲಯ ಕಾಂಗ್ರೆಸ್ ಸಮತಿ ಅಧ್ಯಕ್ಷ ರಫೀಕ್ ಪೇರಿಮಾರ್, ಗ್ರಾ.ಪಂ ಸದಸ್ಯ ರಿಯಾಝ್ ಕುಂಪನಮಜಲ್, ಇಕ್ಬಾಲ್ ಸುಜೀರ್, ಮುಸ್ತಫಾ ಅಮ್ಮೇಮಾರ್, ರಝೀಯಾ ಹಮೀದ್, ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸದಸ್ಯರಾದ ಮಜೀದ್ ಪೇರಿಮಾರ್, ಪೈರೋಝ್ ಇಃಖ, ಮಜೀದ್ ಫರಂಗಿಪೇಟೆ, ಲತೀಫ್ ಮಲಾರ್, ಸಲಾಂ ಮಲ್ಲಿ, ಫಯಾಝ್ ಅಮ್ಮೇಮಾರ್, ಇಸ್ಮಾಯಿಲ್ ಮಜಪೆ, ಸಿರಾಜ್ ಪೇರಿಮಾರ್, ಮುಸ್ತಫಾ ಪೇರಿಮಾರ್, ಪ್ರವೀಣ್ ತುಂಬೆ, ಜಗದೀಶ್ ತುಂಬೆ, ಹಾಗೂ ಪುದು ಸಮಾಜಿಕ ಜಾಲತಾಣದ ಉಸ್ತುವಾರಿ ಆತೀಕ್ ಅಬೂಬಕ್ಕರ್ ಫರಂಗಿಪೇಟೆ, ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಮಿತಿಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

