ಮೂಡುಬಿದಿರೆ: ಇಲ್ಲಿನ ಅಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.13ರಿಂದ 15ರವರೆಗೆ ಸಾಯಂಕಾಲ 6ರಿಂದ 7.30ರವರೆಗೆ ಶ್ರೀಕೃಷ್ಣ ಮಾಲಾ ಪ್ರವಚನ ಮಾಲಿಕೆ, ಡಿ.17ರಂದು ಅಥರ್ವ ಸಂಹಿತಾ ಯಾಗ ನಡೆಯಲಿದೆ. ಹರಿವಂಶ, ಭಾಗವತ ಮತ್ತು ಮಹಾಭಾರತದ ಆಯ್ದ ಭಾಗಗಳ ಕುರಿತು ಬೆಂಗಳೂರಿನ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರು ಪ್ರವಚನ ನೀಡಲಿದ್ದಾರೆ.

74_big
ಡಿ.16ರಂದು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಧರ್ಮಪಾರಮ್ಯ ಯಕ್ಷಗಾನ ತಾಳಮದ್ದಳೆ, ಡಿ17ರಂದು ಅಥರ್ವ ಸಂಹಿತಾ ಯಾಗ, ಅಪರಾಹ್ನ ಅನ್ನಸಂತರ್ಪಣೆ, ಸಂಜೆ 6.30ರಿಂದ ಹನುಮ ಗಿರಿ ಮೇಳದವರಿಂದ ಮಾಯಾವಿಹಾರಿ ಕಾಲಮಿತಿ ಯಕ್ಷಗಾನ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಈಶ್ವರ ಭಟ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *